Video viral:(ಪೆ.12) ಸರಸ್ವತಿ ಪೂಜೆಯನ್ನು ಪ್ರತಿವರ್ಷ ಬಹಳ ಭಕ್ತಿಪೂರ್ವಕವಾಗಿ ಆಚರಿಸಲಾಗುತ್ತದೆ. ಇನ್ನೂ ಕೆಲವು ಶಾಲಾ ಕಾಲೇಜುಗಳಲ್ಲೂ ಸರಸ್ವತಿ ಪೂಜೆಯನ್ನು ಆಚರಿಸಲುವ ಸಂಪ್ರದಾಯವಿದೆ.

ಅದೇ ರೀತಿ ಇಲ್ಲೊಂದು ಎಂಜಿನಿಯರಿಂಗ್ ಕಾಲೇಜಿನಲ್ಲೂ ಸರಸ್ವತಿ ಪೂಜೆ ಏರ್ಪಡಿಸಿದ್ದು, ದುಃಖಕರ ಸಂಗತಿಯೇನೆಂದರೆ ಈ ಪವಿತ್ರ ಕಾರ್ಯ ನಡೆಯುವ ಸಂದರ್ಭದಲ್ಲಿ ವಿದ್ಯಾರ್ಥಿನಿಯೋರ್ವಳು ಅಶ್ಲೀಲ ಡ್ಯಾನ್ಸ್ ಮಾಡಿದ್ದಾಳೆ.
ಹೌದು ಆಕೆ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಸರಸ್ವತಿ ಪೂಜೆಯ ಸಂದರ್ಭದಲ್ಲಿ ಸ್ಟೇಜ್ ಮೇಲೆ ಅಸಭ್ಯ ನೃತ್ಯ ಪ್ರದರ್ಶನ ಮಾಡಿದ್ದಾಳೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದ್ದು, ಹೀಗೆ ಅಸಭ್ಯ ನೃತ್ಯ ಮಾಡಿದ್ದಕ್ಕೆ ನೆಟ್ಟಿಗರು ಯುವತಿಯ ವಿರುದ್ಧ ಭಾರಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

https://www.instagram.com/reel/DF4Q4jnPZ8F/?utm_source=ig_web_button_share_sheet
ಈ ಘಟನೆ ನೇಪಾಳದಲ್ಲಿ ನಡೆದಿದ್ದು, ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿಯೋರ್ವಳು ಸರಸ್ವತಿ ಪೂಜೆಯ ಸಂದರ್ಭದಲ್ಲಿ ಅಶ್ಲೀಲ ನೃತ್ಯ ಪ್ರದರ್ಶನ ಮಾಡಿ ಟೀಕೆಗೆ ಗುರಿಯಾಗಿದ್ದಾಳೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸರಸ್ವತಿ ಪೂಜೆಯ ವೇಳೆ ವಿದ್ಯಾರ್ಥಿನಿಯೋರ್ವಳು ಸ್ಟೇಜ್ ಮೇಲೆ ಅಶ್ಲೀಲ ನೃತ್ಯ ಪ್ರದರ್ಶನ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು.



