Sat. Feb 22nd, 2025

Crime News: ಪತ್ನಿ ಬಗ್ಗೆ ಶಂಕೆ – ಕೋಪದಲ್ಲಿ ಚಾಕುವಿನಿಂದ ಆಕೆಯ ಕಣ್ಣುಗುಡ್ಡೆಗಳನ್ನು ಕಿತ್ತ ರಕ್ಕಸ ಪತಿ

ಮಧ್ಯಪ್ರದೇಶ:(ಪೆ.13) ಪತ್ನಿ ಯಾರೊಂದಿಗೋ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಅನುಮಾನ ಪಟ್ಟ ಪತಿ ಕೋಪದಲ್ಲಿ ಚಾಕುವಿನಿಂದ ಆಕೆಯ ಕಣ್ಣುಗುಡ್ಡೆಗಳನ್ನೇ ಕಿತ್ತು ಹಾಕಿರುವ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ. ಆ ವ್ಯಕ್ತಿ ಆಕೆಯ ಎರಡೂ ಕಣ್ಣುಗಳನ್ನು ಚಾಕುವಿನಿಂದ ಕಿತ್ತುಹಾಕಿದ್ದಲ್ಲದೆ, ಆಕೆಯ ಖಾಸಗಿ ಭಾಗಗಳು ಸೇರಿದಂತೆ ಹಲವು ಕಡೆ ಗಾಯಗಳನ್ನು ಮಾಡಿದ ಘಟನೆ ವರದಿಯಾಗಿದೆ.

ಇದನ್ನೂ ಓದಿ: ಪಡುಬಿದ್ರಿ: ಅಂತರ್‌ ಜಿಲ್ಲಾ ಕುಖ್ಯಾತ ಬೈಕ್‌ ಕಳ್ಳರ ಬಂಧನ!!!

ಬುಧವಾರ ಪೋಹ್ರಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಛೋಟು ಖಾನ್ ಎಂದು ಪೊಲೀಸರು ಗುರುತಿಸಿದ್ದಾರೆ. ಆತ ತನ್ನ ಪತ್ನಿಯ ಮೊಬೈಲ್ ಫೋನ್ ಕೇಳಿದ್ದ, ಆದರೆ ಆಕೆ ನಿರಾಕರಿಸಿದಾಗ ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ದಂಪತಿ ಮದುವೆಯಾಗಿ ಮೂರು ವರ್ಷಗಳು ಕಳೆದಿದ್ದವು, ಆಗಾಗ ಅವರ ಮಧ್ಯೆ ವೈಮನಸ್ಸು ಮೂಡುತ್ತಿತ್ತು. ಪತ್ನಿಯ ಮೇಲೆ ಹಲ್ಲೆ ಮಾಡಿದ ನಂತರ, ಆ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ನೆರೆಹೊರೆಯವರು ಸಂತ್ರಸ್ತೆಯ ಕುಟುಂಬಕ್ಕೆ ಮಾಹಿತಿ ನೀಡಿದ ನಂತರವೇ, ರಕ್ತಸಿಕ್ತವಾಗಿ ಬಿದ್ದಿದ್ದ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಪರಾಧದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಪೊಲೀಸ್ ಅಧಿಕಾರಿಗಳು ಪ್ರಸ್ತುತ ಸಂತ್ರಸ್ತೆ ಮತ್ತು ಆಕೆಯ ಕುಟುಂಬದಿಂದ ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ. ಏತನ್ಮಧ್ಯೆ, ಪರಾರಿಯಾಗಿರುವವ ಪತಿಯನ್ನು ಪತ್ತೆಹಚ್ಚಲು ಶೋಧ ಕಾರ್ಯ ಆರಂಭಿಸಲಾಗಿದೆ. ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *