Sun. Feb 23rd, 2025

Dharmasthala: 40 ವರ್ಷಗಳ ಇತಿಹಾಸವಿರುವ ಸುನಿಲ್ ಟೆಕ್ಸ್‌ ಟೈಲ್ಸ್ ನ ನೂತನ ಜವಳಿ ಅಂಗಡಿ ಶುಭಾರಂಭ – ಧರ್ಮಸ್ಥಳದ ಕಲ್ಲೇರಿಯ ಉನ್ನತಿ ಕಟ್ಟಡದಲ್ಲಿ ಸುನಿಲ್ ರೆಡಿವೇರ್ಸ್ ಆರಂಭ

ಧರ್ಮಸ್ಥಳ:(ಫೆ.14) ಇಲ್ಲಿಯ ಕಲ್ಲೇರಿ ಉನ್ನತಿ ವಾಣಿಜ್ಯ ಸಂಕೀರ್ಣದಲ್ಲಿ ನೂತನವಾಗಿ ಪ್ರಾರಂಭಗೊಂಡ ಸುನಿಲ್ ರೆಡಿವೇರ್ಸ್ ವಸ್ತ್ರ ಮಳಿಗೆಯು ಫೆ. 14 ರಂದು ಶುಭಾರಂಭಗೊಂಡಿತು. ಕಾರ್ಯಕ್ರಮವನ್ನು ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಇದನ್ನೂ ಓದಿ: ಮೊಗ್ರು :(ಫೆ.14) ಇಂದು ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ (ರಿ.) ಅಲೆಕ್ಕಿ–ಮುಗೇರಡ್ಕ, ಮೊಗ್ರು ಇದರ 25 ನೇ ವರ್ಷದ ರಜತ ಪಥ ಕಾರ್ಯಕ್ರಮದ ಪ್ರಯುಕ್ತ

ನೂತನ ಜವಳಿ ಮಳಿಗೆಯನ್ನು ರಿಬ್ಬನ್ ತೆರೆಯುವ ಮೂಲಕ ಧರ್ಮಸ್ಥಳ ಅಶ್ವಿನಿ ಕ್ಲಿನಿಕ್ ನ ಡಾ. ಮೃಣಾಲಿನಿ ಲೋಕಾರ್ಪಣೆ ಮಾಡಿದರು. ಬಳಿಕ ಮಾತನಾಡಿದ ಎ.ವಿ. ಶೆಟ್ಟಿ, ಜವಳಿ ಮಳಿಗೆಯನ್ನು ನಿಭಾಯಿಸೋಕೆ ಅನುಭವ ಬೇಕು . ಎಲ್ಲದಕ್ಕೂ ಮುಖ್ಯವಾಗಿ ಹಣ , ತಾಳ್ಮೆ ಬೇಕು. ಗ್ರಾಹಕರು ವಿವಿಧ ಬದಲಾವಣೆಗಳನ್ನು ಕೇಳುತ್ತಾರೆ.

ಅವರಿಗೆ ತಕ್ಕುದಾದ ಜವಳಿಗಳನ್ನು ನೀಡಬೇಕು ಆಗ ಗ್ರಾಹಕರು ಖುಷಿ ಆಗುತ್ತಾರೆ. ಬಟ್ಟೆ ಅಂಗಡಿಯಲ್ಲಿ ಯಶಸ್ಸು ಪಡೆದರೆ ಜೀವನದಲ್ಲೂ ಯಶಸ್ಸು ಪಡೆಯುತ್ತಾರೆ ಎಂದರು. ಈ ಅಂಗಡಿಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಬಳಿಕ ಮಾತನಾಡಿದ ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಾಡಿತ್ತಾಯ, ಶುಕ್ರವಾರದ ಶುಭ ದಿನದಂದೇ ಅಂಗಡಿ ತೆರೆದು ಉದ್ಘಾಟನೆ ಮಾಡಿದ್ದೀರಿ, ಶುಭ ಶುಕ್ರವಾರದಂದು ಲಕ್ಷ್ಮೀ ಒಲಿದು ಬರಲಿ ಎಂದರು. ಶೀಘ್ರದಲ್ಲೇ ಪಕ್ಕದಲ್ಲಿ ಕಲ್ಯಾಣ ಮಂಟಪ ಆರಂಭವಾಗಲಿದೆ.

ಎಲ್ಲರೂ ಇಲ್ಲೇ ಬಂದು ಬಟ್ಟೆಗಳನ್ನು ಖರೀದಿಸುವಂತೆ ಆಗಲಿ ಎಂದು ಶುಭ ಹಾರೈಸಿದರು. ಬಳಿಕ ಮಾತನಾಡಿದ ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ್ ರಾವ್ , ಸುನಿಲ್ ಟೆಕ್ಸ್‌ ಟೈಲ್ಸ್ ಸಾಂಪ್ರದಾಯಿಕ ಜವಳಿ ಅಂಗಡಿ ಆಗಿದೆ. ಹಲವು ವರ್ಷಗಳಿಂದ ಉಜಿರೆಯಲ್ಲಿ ಸುನಿಲ್ ಟೆಕ್ಸ್‌ ಟೈಲ್ಸ್ ಕಾರ್ಯನಿರ್ವಹಿಸುತ್ತಿದ್ದು ಜನ ಮಾನಸ ತಲುಪಿದೆ.

ಉಜಿರೆಯಲ್ಲಿ ಎಷ್ಟೇ ಜವಳಿ ಅಂಗಡಿಗಳು ಆದರೂ ಕೂಡ ಸುನಿಲ್ ಜವಳಿ ಅಂಗಡಿಗೆ ಈಗಲೂ ಉತ್ತಮ ಗ್ರಾಹಕರು ಇದ್ದಾರೆ ಅದಕ್ಕೆ ಕಾರಣ ಅವರ ಸೇವಾ ಮನೋಭಾವ ಎಂದರು. ಇವರ ಈ ನೂತನ ಅಂಗಡಿಗೆ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು. ಈ ವೇಳೆ ಧರ್ಮಸ್ಥಳ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರೀತಮ್ ಡಿ, ಹಿರಿಯರಾದ ಶ್ರೀಧರ ರಾವ್. ಸುನಿಲ್ ಬೇಕಲ್, ಸಂಸ್ಥೆಯ ಮಾಲಕರಾದ ವಿನೋದ್ ಕುಮಾರ್ ಸಿ. ಹೆಚ್., ಆದರ್ಶ್ ಕೆ.ಜೆ ಉಪಸ್ಥಿತರಿದ್ದರು. ಬಂದಂತಹ ಅತಿಥಿ ಗಣ್ಯರನ್ನು ಸತ್ಕರಿಸಿದರು. ಪವಿತ್ರ ಧನ್ಯವಾದವಿತ್ತರು.

Leave a Reply

Your email address will not be published. Required fields are marked *