ಬಲವಂತವಾಗಿ ಮದುವೆ ಮಾಡಿದ್ದರಿಂದ ಫೆಬ್ರವರಿ 3 ರಂದು ತನ್ನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.
ಆಕೆಯ 19 ವರ್ಷದ ಗೆಳೆಯ ಸಜೀರ್ ನಂತರ ತನ್ನ ಮಣಿಕಟ್ಟನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.

ಮಂಜೇರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಜೀರ್ ಯಾರೊಬ್ಬರಿಗೂ ತಿಳಿಸದೆ ಆಸ್ಪತ್ರೆಯಿಂದ ಪರಾರಿಯಾಗಿದ್ದ. ನಂತರ ಅವನು ಎಡವಣ್ಣದಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ.


ಶೈಮಾಳ ನಿಖಾಹ್ (ಮದುವೆಯ ಸಮಾರಂಭ) ಆದ ಮೂರೇ ದಿನಗಳಲ್ಲಿ ಆಕೆಯ ಸಾವು ಸಂಭವಿಸಿದ್ದು ಸ್ವಾಗತ ಸಮಾರಂಭ ನಡೆಯುವ ಸ್ವಲ್ಪ ಸಮಯದ ಮೊದಲು ಈ ದುರಂತ ಸಂಭವಿಸಿತ್ತು.

ಶೈಮಾಳಿಗೆ ಮದುವೆಯಲ್ಲಿ ಆಸಕ್ತಿ ಇರಲಿಲ್ಲ ಮತ್ತು ಸಜೀರ್‌ನನ್ನು ಮದುವೆಯಾಗಲು ಬಯಸಿದ್ದಳು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಆಕೆಯನ್ನು ಬಲವಂತವಾಗಿ ಮದುವೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

