ಮಡಿಕೇರಿ(ಫೆ.14):- ಸೇವಾಧಾಮ – ಸೇವಾಭಾರತಿ ಕೊಡಗು ಜಿಲ್ಲೆ ಇದರ ಆಶ್ರಯದಲ್ಲಿ ಶ್ರೀ ಕಾವೇರಿ ಕೃಪಾ ವಿಶ್ವಕಲ್ಯಾಣ ಸೇವಾ ಸಮಿತಿ(ರಿ.), ಅಶ್ವಿನಿ ಆಸ್ಪತ್ರೆ ಮಡಿಕೇರಿ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆ, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಕೊಡಗು ಶಾಖೆ ಮತ್ತು ವಿಕಾಸ ಜನ ಸೇವಾ ಟ್ರಸ್ಟ್(ರಿ.),ಆಶ್ರಮ ಮಡಿಕೇರಿ ಇವರ ಸಹಕಾರದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ವಸತಿಯುತ

29ನೇ ಉಚಿತ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಶಿಬಿರ ಹಾಗೂ ಗಾಲಿಕುರ್ಚಿ ಜಾಥಾದ ಉದ್ಘಾಟನಾ ಸಮಾರಂಭವು ಫೆಬ್ರವರಿ 14 ರಂದು ಅಶ್ವಿನಿ ಆಸ್ಪತ್ರೆ, ಮಡಿಕೇರಿಯಲ್ಲಿ ನಡೆಯಿತು.
ಇದನ್ನೂ ಓದಿ: ಕುಂದಾಪುರ: ಸಹಕಾರ ಸಂಸ್ಥೆಯಿಂದ ಕೋಟ್ಯಂತರ ರೂ. ವಂಚನೆ ಆರೋಪ
ಕಾರ್ಯಕ್ರಮವನ್ನು ಮಡಿಕೇರಿ ಅಶ್ವಿನಿ ಆಸ್ಪತ್ರೆಯ ಕಾರ್ಯದರ್ಶಿ ಕುಪ್ಪಂಡ ರಾಚಪ್ಪ ಉದ್ಘಾಟಿಸಿ ಸೇವಾಧಾಮ ಮಾಡುವ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿ ಈಗಾಗಲೇ ಎರಡು ಬಾರಿ ಅಶ್ವಿನಿ ಆಸ್ಪತ್ರೆ ಉಚಿತವಾಗಿ ಶಿಬಿರವನ್ನು ನಡೆಸಿಕೊಡಲು ಸಂಪೂರ್ಣ ಸಹಕಾರವನ್ನು ನೀಡಿದ್ದು ಇನ್ನು ಮುಂದೆಯೂ ನಮ್ಮ ಆಸ್ಪತ್ರೆಯಿಂದ ನಿಮಗೆ ಸಂಪೂರ್ಣ ಸಹಕಾರವನ್ನು ನೀಡುತ್ತೇವೆ ಹಾಗೇ ಸೇವಾಭಾರತಿ ಸಂಸ್ಥೆಯು ಇನ್ನು ಹೆಚ್ಚಿನ ಸೇವಾಕಾರ್ಯಗಳನ್ನು ಮಾಡುವ ಯಶಸ್ಸು ನಿಮ್ಮದಾಗಲಿ ಎಂದು ಉದ್ಘಾಟಕರ ನುಡಿಗಳನ್ನಾಡಿದರು.
ಸಂಸ್ಥೆಯ ಸಂಸ್ಥಾಪಕರಾದ ಕೆ. ವಿನಾಯಕ ರಾವ್ ಪ್ರಾಸ್ತಾವಿಕ ನುಡಿಗಳನ್ನಾಡಿ ಮಡಿಕೇರಿಯಲ್ಲಿ ಶಿಬಿರವನ್ನು ನಡೆಸಲು ಅಶ್ವಿನಿ ಆಸ್ಪತ್ರೆ ಮತ್ತು ವಿಕಾಸ ಜನ ಸೇವಾ ಟ್ರಸ್ಟ್ (ರಿ.), ಕಳೆದ ವರ್ಷ ನಮಗೆ ಸಂಪೂರ್ಣ ಸಹಕಾರವನ್ನು ನೀಡಿ ಈ ವರ್ಷವೂ ನಮ್ಮ ಜೊತೆ ಕೈಜೋಡಿಸಿದ್ದಾರೆ. ಅದರ ಜೊತೆಗೆ ಈ ಬಾರಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನವರು ಜೊತೆಗಿದ್ದು ಶಿಬಿರವನ್ನು ನಡೆಸಿಕೊಡಲು ಸಂಪೂರ್ಣ ಸಹಕಾರವನ್ನು ನೀಡಿ ನಮಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಸಂತಸವನ್ನು ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಮಡಿಕೇರಿ ವಿಕಾಸ ಜನ ಸೇವಾ ಟ್ರಸ್ಟ್(ರಿ.), ಸದಸ್ಯರಾದ ಕೋಚನ ಎಂ. ಚೇತನ್, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಲಹಾ ಸಮಿತಿ ಸದಸ್ಯರಾದ ಅಜಯ್ ಸೂದ್, ವಿಕಾಸ ಜನ ಸೇವಾ ಟ್ರಸ್ಟ್ (ರಿ.), ಗೌರವಾಧ್ಯಕ್ಷರಾದ ಕಾರ್ಯಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಮಡಿಕೇರಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಪ್ರೋಗ್ರಾಮ್ ಸ್ಪೆಷಲಿಸ್ಟ್ ಬೋರಯ್ಯ ಸ್ವಾಗತಿಸಿ, ಹಿರಿಯ ಪ್ರಬಂಧಕರಾದ ಚರಣ್ ಕುಮಾರ್ ಎಂ ಕಾರ್ಯಕ್ರಮವನ್ನು ನಿರೂಪಿಸಿ, ದಕ್ಷಿಣ ಕನ್ನಡ ಮತ್ತು ಕೊಡಗು ಕ್ಷೇತ್ರ ಸಂಯೋಜಕರಾದ ಕುಸುಮಾಧರ್ ಧನ್ಯವಾದವಿತ್ತರು. ಒಟ್ಟು 15 ಮಂದಿ ಶಿಬಿರಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.
