ಸುರತ್ಕಲ್ :(ಫೆ.14) ರಸ್ತೆ ಬದಿ ನಿಲ್ಲಿಸಿದ್ದ ಟ್ಯಾಂಕರ್ ಚಲಿಸಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ ದಾಟಿ ಹೋಟೆಲ್ ಗೆ ನುಗ್ಗಿ ಕಾರು, ಬೈಕ್ ಗಳನ್ನು ಜಖಂಗೊಳಿಸಿದ ಘಟನೆ ಗುರುವಾರ ರಾತ್ರಿ ಹೊನ್ನಕಟ್ಟೆ ಜಂಕ್ಷನ್ ನಲ್ಲಿ ನಡೆದಿದೆ.

ಇದನ್ನೂ ಓದಿ: ಕೇರಳ: ಇಷ್ಟವಿಲ್ಲದಿದ್ದರೂ ಮದುವೆಯಾದ ಯುವತಿ
ಕುಳಾಯಿಗುಡ್ಡೆಗೆ ಹೋಗುವ ರಸ್ತೆಯಲ್ಲಿ ಟ್ಯಾಂಕರ್ ನಿಲ್ಲಿಸಿ ಅದರ ಚಾಲಕ ಹೊಟೇಲ್ ಗೆ ತೆರಳಿದ್ದರು. ಈ ವೇಳೆ ಲಾರಿ ಏಕಾಏಕಿ ಇಳಿಜಾರಾಗಿರುವ ರಸ್ತೆಯಾಗಿ ರಾಷ್ಟೀಯ ಹೆದ್ದಾರಿ 66ನ್ನು ದಾಟಿಕೊಂಡು ಹೊಟೇಲ್ ಗೆ ಡಿಕ್ಕಿ ಹೊಡೆದಿದೆ.
ಅಲ್ಲದೆ, ಈ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಕಾರು, ಆಟೋ ರಿಕ್ಷಾ ಹಾಗೂ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಿಂದ ಎರಡು ಆಟೋ ರಿಕ್ಷಾಗಳು, ಎರಡು ಕಾರು ಹಾಗೂ ಒಂದು ದ್ವಿಚಕ್ರ ವಾಹನ ಜಖಂಗೊಂಡಿದೆ ಎಂದು ತಿಳಿದುಬಂದಿದೆ.




