ಉಡುಪಿ,(ಫೆ.14) : ರೈಲಿನಲ್ಲಿ ಒಂಟಿಯಾಗಿ ಸಂಚರಿಸುತ್ತಿದ್ದ ಅಪ್ರಾಪ್ತ ಬಾಲಕನನ್ನು ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ರಕ್ಷಿಸಿರುವ ಘಟನೆ ಬುಧವಾರ ನಡೆದಿದೆ.

ಇದನ್ನೂ ಓದಿ: ಬೆಳ್ತಂಗಡಿ: ಇಂದು ಊರಿಗೆ ಮರಳುವ ಸಂತೋಷದಲ್ಲಿದ್ದ ಬೆಳ್ತಂಗಡಿಯ ಹಿದಾಯತ್ ಸೌದಿ ಅರೇಬಿಯಾದಲ್ಲಿ ಸಾವು
ರೈಲಿನಲ್ಲಿ ಸಂಚರಿಸುತ್ತಿದ್ದ ಬಾಲಕನ ಚಲನ ವಲನದಲ್ಲಿ ಅನುಮಾನಗೊಂಡ ಪ್ರಯಾಣಿಕರು, ರೈಲ್ವೆ ಪೋಲಿಸರಿಗೆ ಮಾಹಿತಿ ನೀಡಿದ್ದರು. ಪೋಲಿಸರು ಬಾಲಕನ ವಿಚಾರಿಸಿದಾಗ, ಹೆಸರು ಸೂರಜ್ ಓಮಿ,ಬಾಲಕ ಪುಣೆಯ ವಸತಿ ಶಾಲೆಯ ವಿದ್ಯಾರ್ಥಿ, ಶಿಕ್ಷಣ ಸಂಸ್ಥೆಗೆ ಮಾಹಿತಿ ನೀಡದೆ ಪಲಾಯನ ಮಾಡಿದ್ದಾನೆಂದು ತಿಳಿದುಬಂದಿತು.


ತಕ್ಷಣ ರೈಲ್ವೆ ಪೋಲಿಸರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ನೆರವು ಪಡೆದರು. ಒಳಕಾಡುವರು ಘಟನಾ ಸ್ಥಳಕ್ಕೆ ಬಂದು,ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಆದೇಶ ಪಡೆದು, ಬಾಲಕನನ್ನು ದೊಡ್ಡಣಗುಡ್ಡೆಯಲ್ಲಿರುವ ಸರಕಾರಿ ಬಾಲಕರ ಬಾಲ ಭವನದಲ್ಲಿ ಮಕ್ಕಳ ಸಹಾಯವಾಣಿ ಕೇಂದ್ರದ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಪುರ್ನವಸತಿ ಕಲ್ಪಿಸಿದ್ದಾರೆ.

ಕಾರ್ಯಚರಣೆಯಲ್ಲಿ ರೈಲ್ವೆ ಆರ್ ಪಿ ಎಫ್ ಸುಧೀರ್ ಶೆಟ್ಟಿ, ಮತ್ತು ಜೀನಾ ಪಿಂಟೋ, ಮಕ್ಕಳ ಸಹಾಯವಾಣಿ ಕೇಂದ್ರದ ಕೆಸ್ ವರ್ಕರ್ ಚಂದ್ರಕಾಂತು, ಹಾಗೂ ಯೋಜನಾ ಸಂಯೋಜಕಿ ಜ್ಯೋತಿ ಭಾಗಿಯಾಗಿದ್ದರು. ಉಡುಪಿ ಜಿಲ್ಲಾ ನಾಗರೀಕ ಸಮಿತಿ ವಾಹನದ ಸೇವೆ ನೀಡಿತು.

