Sun. Feb 23rd, 2025

Belthangady: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸಭೆ ಹಾಗೂ ಅಭಿನಂದನಾ ಕಾರ್ಯಕ್ರಮ

ಬೆಳ್ತಂಗಡಿ :(ಫೆ.15) ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸಭೆ ಹಾಗೂ ಅಭಿನಂದನಾ ಕಾರ್ಯಕ್ರಮ ಪಕ್ಷದ ಕಚೇರಿಯಲ್ಲಿ ಮಂಡಲ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷರಾದ ವಿದ್ಯಾಶ್ರೀನಿವಾಸ್ ಗೌಡ ಬೆಳಾಲು ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಇದನ್ನೂ ಓದಿ: ಸಕಲೇಶಪುರ: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ಶ್ರದ್ಧಾಂಜಲಿ..!

ವಂದೇ ಮಾತರಂ ಗೀತೆಯನ್ನು ಹಾಡಿ, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಭೆ ಆರಂಭಗೊಂಡಿತು.ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಯವರಾದ ಶ್ರೀಮತಿ ಲಖಿತ ಶೆಟ್ಟಿ ಯವರು ಆಗಮಿಸಿ ಅಹಲ್ಯ ಬಾಯಿ ಹೊಳ್ಕರ್ ಅವರ 300 ನೇ ಜನ್ಮ ಶತಾಬ್ದಿಯ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

ಹಾಗೂ ಇದೇ ಬರುವ ದಿನಾಂಕ 23ರಿಂದ 29 ರೊಳಗೆ ಸಾಮರಸ್ಯ ಕಾರ್ಯಕ್ರಮದಡಿಯಲ್ಲಿ ಶಕ್ತಿಕೇಂದ್ರವಾರು ಪ್ರಮುಖರು ಒಂದು ಕುಟುಂಬವನ್ನು ತಮ್ಮ ಮನೆಗೆ ಕರೆದು ಸಹಭೋಜನವನ್ನು ಮಾಡಬೇಕು ಎಂದು ಹೇಳಿದರು. ಹಾಗೆಯೇ ಉಪಸ್ಥಿತರಿದ್ದ ಜಿಲ್ಲಾ ಮಹಿಳಾಮೋರ್ಚಾ ಉಪಾಧ್ಯಕ್ಷರೂ ಹಾಗೂ ಬೆಳ್ತಂಗಡಿ ಮಹಿಳಾ ಮೋರ್ಚಾ ಪ್ರಭಾರಿ ಶ್ರೀಮತಿ ಬಬಿತ ಇವರು ಮಹಿಳಾ ಮೋರ್ಚಾದಲ್ಲಿ ನಡೆಯುವ ಕಾರ್ಯವೈಖರಿಯ ಬಗ್ಗೆ ಶ್ಲಾಘನೀಯ ಮಾತುಗಳನ್ನಾಡಿದರು ಮತ್ತು ಸಮಯ ಪಾಲನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ತಿಳಿಸಿದರು.

ಜಿಲ್ಲಾ ಭಾಜಪಾ ಕಾರ್ಯದರ್ಶಿ ಶ್ರೀಮತಿ ವಸಂತಿ ಮಚ್ಚಿನ,ಬೆಳ್ತಂಗಡಿ ಮಂಡಲ ಪ್ರಧಾನಕಾರ್ಯದರ್ಶಿ ಹಾಗೂ ಮಹಿಳಾಮೋರ್ಚಾದ ಮಂಡಲ ಪ್ರಭಾರಿ ಜಯಾನಂದ ಗೌಡ ಸಮಾಯೋಚಿತವಾಗಿ ಮಾತುಗಳನ್ನಾಡಿದರು, ಇದೆ ಸಂದರ್ಭದಲ್ಲಿ ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ನಿರ್ದೇಶಕಿಯಾಗಿ ಆಯ್ಕೆಯಾದ ರೈತ ಮೋರ್ಚಾದ ಸದಸ್ಯೆಯಾದ ಅಶ್ವಿನಿ ಹೆಬ್ಬಾರ್, ಉಜಿರೆ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ಅಧ್ಯಕ್ಷೆಯಾಗಿ ಆಯ್ಕೆಯಾದ ಮಹಿಳಾ ಮೋರ್ಚಾ ಕಾರ್ಯದರ್ಶಿಯಾದ ಶಶಿಕಲಾ ದೇವಪ್ಪ ಗೌಡ ಸಾಯಿಕೃಪಾ ಉಜಿರೆ,

ಉಪಾಧ್ಯಕ್ಷರಾಗಿ ಆಯ್ಕೆಯಾದ ಹಿಂದುಳಿದ ಮೋರ್ಚಾ ಸದಸ್ಯೆ ಆದ ಪ್ರಮೀಳಾ ಉಜಿರೆ, ಬೆಳ್ತಂಗಡಿ ಜೆ ಸಿ ಐ ಅಧ್ಯಕ್ಷರಾಗಿ ಆಯ್ಕೆಯಾದ ಮಹಿಳಾ ಮೋರ್ಚಾ ಸದಸ್ಯೆಯಾದ ಆಶಾಲತ ಇವರುಗಳನ್ನು ಅಭಿನಂದಿಸಲಾಯಿತು .

ಈ ಸಭೆಯಲ್ಲಿ ಮಹಿಳಾ ಮೋರ್ಚಾ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು. ಮಂಡಲ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಪೂರ್ಣಿಮಾ ಜಯಂತ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಶ್ರೀಮತಿ ತುಳಸಿ ಉಮೇಶ್ ನಿರೂಪಿಸಿ , ಶ್ರೀಮತಿ ಚಂಚಲಾಕ್ಷಿ ಇವರು ಧನ್ಯವಾದವಿತ್ತರು.

Leave a Reply

Your email address will not be published. Required fields are marked *