ಮಡಿಕೇರಿ(ಫೆ.15):- ಸೇವಾಧಾಮ – ಸೇವಾಭಾರತಿ ಕೊಡಗು ಜಿಲ್ಲೆ ಇದರ ಆಶ್ರಯದಲ್ಲಿ ಶ್ರೀ ಕಾವೇರಿ ಕೃಪಾ ವಿಶ್ವಕಲ್ಯಾಣ ಸೇವಾ ಸಮಿತಿ(ರಿ.), ಅಶ್ವಿನಿ ಆಸ್ಪತ್ರೆ ಮಡಿಕೇರಿ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆ, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಕೊಡಗು ಶಾಖೆ ಮತ್ತು ವಿಕಾಸ ಜನ ಸೇವಾ ಟ್ರಸ್ಟ್(ರಿ.),ಆಶ್ರಮ ಮಡಿಕೇರಿ ಇವರ ಸಹಕಾರದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ವಸತಿಯುತ
29ನೇ ಉಚಿತ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಶಿಬಿರದಲ್ಲಿ ಗಾಲಿಕುರ್ಚಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.

ಇದನ್ನೂ ಓದಿ: ಉಜಿರೆ: ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಸಿಬ್ಬಂದಿಗಳು
ಜನ ಸಾಮಾನ್ಯರಿಗೆ ಬೆನ್ನುಹುರಿ ಅಪಘಾತದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಹಾಗೇ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರನ್ನು ಮುಖ್ಯವಾಹಿನಿಗೆ ಕರೆ ತರುವ ಉದ್ದೇಶದಿಂದ ಫೆಬ್ರವರಿ 15 ರಂದು ಜಾಥಾವನ್ನು ನಡೆಸಲಾಯಿತು. ಕೊಡಗು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ತಿಮ್ಮಯ್ಯ ಎನ್. ಟಿ ಹಸಿರು ನಿಷಾನೆಯನ್ನು ಹಾರಿಸಿ ಜಾಥಾಕ್ಕೆ ಚಾಲನೆಯನ್ನು ನೀಡಿ ಗಾಲಿಕುರ್ಚಿ ರ‍್ಯಾಲಿಯನ್ನು ರಾಜ ಸೀಟ್ ನಿಂದ ಪ್ರಾರಂಭಿಸಿ ದೇವಯ್ಯ ಸರ್ಕಲ್ ಮುಖಾಂತರ ಜನರಲ್ ಕೆ ಎಸ್ ತಿಮ್ಮಯ್ಯ ವೃತ್ತದಿಂದ ಸಾಗಿ ಅಶ್ವಿನಿ ಆಸ್ಪತ್ರೆಯ ತನಕ ನಡೆಸಲಾಯಿತು.




ಈ ಸಂದರ್ಭದಲ್ಲಿ ಒಟ್ಟು 12 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು ಮತ್ತು ಅರೈಕೆದಾರರು, ಅಶ್ವಿನಿ ಆಸ್ಪತ್ರೆ ಮ್ಯಾನೇಜರ್ ರವೀಂದ್ರ, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಪ್ರೋಗ್ರಾಮ್ ಸ್ಪೆಷಲಿಸ್ಟ್ ಬೋರಯ್ಯ, ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಎ. ಪಿ ವಿಶ್ವನಾಥ್ ಹಾಗೂ ಎಂ. ಬಿ ಶಿವರಾಮ್ , ಸೇವಾಧಾಮ ಸಂಸ್ಥಾಪಕರಾದ ಕೆ. ವಿನಾಯಕ ರಾವ್, ಸೇವಾಭಾರತಿ ಕಾರ್ಯದರ್ಶಿ ಬಾಲಕೃಷ್ಣ ನೈಮಿಷ, ಸ್ವಯಂಸೇವಕರಾದ ಚಂದನ್ ಗುಡಿಗಾರ್, ಸೇವಾಭಾರತಿ ಸಿಬ್ಬಂದಿವರ್ಗದವರು, ಹಾಗೂ ವಿದ್ಯಾರ್ಥಿಗಳು ಸೇರಿದಂತೆ 100 ಮಂದಿ ಜಾಥದಲ್ಲಿ ಭಾಗವಹಿಸಿದ್ದರು.
