Sun. Feb 23rd, 2025

Sakleshpur: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ಶ್ರದ್ಧಾಂಜಲಿ..! – ಪ್ರೇಮಿಗಳ ದಿನ ಅಲ್ಲ , ಸೈನಿಕರ ಹುತಾತ್ಮ ದಿನ

ಸಕಲೇಶಪುರ:(ಫೆ.15) 2019 ನೇ ಸಾಲಿನ ಫೆಬ್ರವರಿ 14 ರಂದು ನಡೆದ ರಣಭೀಕರ ಸ್ಫೋಟದಲ್ಲಿ ಬಲಿಯಾದ ಸೈನಿಕರಿಗೆ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. 12 ಫೆಬ್ರವರಿ 2019 ರಂದು ಪುಲ್ವಾಮಾ ಮಾರ್ಗವಾಗಿ ತಮ್ಮ ಕರ್ತವ್ಯಕ್ಕೆಂದು ತೆರಳುತ್ತಿದ್ದ CRPF ಸೈನಿಕರ ಮೇಲೆ ಮುಸ್ಲಿಂ ಭಯೋತ್ಪಾದಕ RDX ಬಾಂಬ್ ಸ್ಪೊಟಿಸಿ ಒಂದೇ ಬಸ್ ನಲ್ಲಿ ಇದ್ದ 41 ಜನರ ಶವ ಛಿದ್ರವಾಗಿತ್ತು.

ಇದನ್ನೂ ಓದಿ: ಬಂಟ್ವಾಳ: ಅವಿವಾಹಿತ ಯುವಕ ಜೀವನ್ ತಾವ್ರೋ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌

ಸೈನಿಕರ ಆತ್ಮಕ್ಕೆ ಶಾಂತಿ ಕೋರಲೆಂದು ಸಕಲೇಶಪುರದ ದೋಣಿಗಲ್ ವೃತ್ತದ ಬಳಿ ಪೂಜೆ ಸಲ್ಲಿಸಿ ಮೌನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತಾಡಿದ ಹಿಂದೂ ಮುಖಂಡ ಕೌಶಿಕ್ ಹೆನ್ನಲಿ ಇಂದಿನ ಕಾಲಘಟ್ಟದ ಯುವಕರು ಪಾಶ್ಚಿಮಾತ್ಯ ಸಂಸ್ಕೃತಿ ಕಡೆಗೆ ವಾಲುತ್ತಿದ್ದು , ಅವರ ಮನಸ್ಸನ್ನು ದೇಶಭಕ್ತಿ ಕಡೆಗೆ ಸೆಳೆಯಬೇಕು ಎಂದು ತಿಳಿಸುತ್ತಾ, 14 ಫೆಬ್ರವರಿ ಪ್ರೇಮಿಗಳ ದಿನ ಆಚರಣೆ ಮಾಡುವ ಬದಲು
ಹುತಾತ್ಮ ದಿನ ಎಂದು ಆಚರಣೆ ಮಾಡೋಣ ಎಂದು ಕರೆಕೊಟ್ಟರು.

ಈ ಸಂದರ್ಭದಲ್ಲಿ. ಕ್ಯಾಮನಹಳ್ಳಿ ಪಂಚಾಯತ್ ಅಧ್ಯಕ್ಷರಾದ ಸಚಿನ್, ಹಾದಿಗೆ ಪಂಚಾಯತ್ ಸದಸ್ಯ ಆಕಾಶ್, ವಿನಯ್, ಜತಿನ್, ಗುರು, ಸಚಿನ್ ಬಾಳ್ಯಾಹಳ್ಳ, ದುಷ್ಯಂತ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *