ಉಜಿರೆ:(ಫೆ.15) ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಉಜಿರೆ ಎಸ್‌ಡಿಎಂ ಆಸ್ಪತ್ರೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದಾರೆ.

ಇದನ್ನೂ ಓದಿ: ಸುಳ್ಯ : ವಿದ್ಯಾರ್ಥಿಗಳಿಗೆ ನೆರವಾದ ಸಂಸದ ಕ್ಯಾಪ್ಟನ್ ಚೌಟ
ಫೆಬ್ರವರಿ 12 ರಂದು ಉಜಿರೆಯಿಂದ ಹೊರಟ ಸಿಬ್ಬಂದಿಗಳು ಫೆ. 13 ಗೆ ಅಯೋಧ್ಯೆ ತಲುಪಿದ್ದಾರೆ. ಫೆ. 14 ರಂದು ಪ್ರಯಾಗ್ ರಾಜ್ ಮಹಾಕುಂಭ ಮೇಳದಲ್ಲಿ ಪಾಲ್ಗೊಂಡು ತೀರ್ಥ ಸ್ನಾನ ಮಾಡಿ ಸಂಭ್ರಮಿಸಿದ್ದಾರೆ.


ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಬ್ಬಂದಿಗಳು ಪ್ರಯಾಗ್ ರಾಜ್ ನಲ್ಲಿ ಹೇಳುವಷ್ಟು ಜನಸಮೂಹ ಇಲ್ಲ, ಬರುವಂತಹ ಭಕ್ತಾದಿಗಳಿಗೆ ಎಲ್ಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ.


ಕುಂಭಮೇಳದಲ್ಲಿ ತೀರ್ಥ ಸ್ನಾನ ಮಾಡುವ ಒಂದು ಅನುಭವವವೇ ಬೇರೆ. ಇದರಿಂದ ನಮಗೆ ಮಾನಸಿಕ ನೆಮ್ಮದಿ ದೊರಕಿದೆ ಎಂದು ಹೇಳಿದ್ದಾರೆ.
