ಬೆಳ್ತಂಗಡಿ :(ಫೆ.17) ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಅಂತರಾಷ್ಟ್ರೀಯ ಸಹಾಯಕ ಆಯುಕ್ತರಾದ ಶ್ರೀ ಮಧುಸೂದನ್ ಹವಾಲ ಭೇಟಿ ನೀಡಿರುತ್ತಾರೆ.

ಇದನ್ನೂ ಓದಿ: ಬೆಳಾಲು : ಶ್ರೀ ಅನಂತೋಡಿ ಅನಂತಪದ್ಮನಾಭ ದೇವಸ್ಥಾನದ ವಿವಿಧ ಸಮಿತಿಗಳ ವತಿಯಿಂದ
ಮುಖ್ಯ ಅತಿಥಿಯಾಗಿ ಆಗಮಿಸಿದ ಮಧುಸೂದನ್ ಹವಲಾ ರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು . ಅಂತರಾಷ್ಟ್ರೀಯ ಚಟುವಟಿಕೆಯಾದ ಹೊರದೇಶಗಳ ಜಾಂಬೂರಿಯ ಬಗ್ಗೆ ಮಕ್ಕಳಿಗೆ ತಿಳಿಯಪಡಿಸಿದರು ಹಾಗೂ ಗುರು ಹಿರಿಯರಿಗೆ ಗೌರವ ಸೂಚಿಸುವುದನ್ನು ವಿದ್ಯಾರ್ಥಿಗಳು ಕಲಿಯಬೇಕು ಹಾಗೂ ಪೋಷಕ ರನ್ನು ಗೌರವಿಸುವುದನ್ನು ವಿದ್ಯಾರ್ಥಿಗಳು ಕಲಿಯಬೇಕು ಎಂಬುದನ್ನು ತಿಳಿಯಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಹಾಯಕ ಆಯುಕ್ತರಾದ ಬಿ ಸೋಮಶೇಖರ ಶೆಟ್ಟಿ, ಮುಖ್ಯ ಶಿಕ್ಷಕರಾದ ಶ್ರೀಮತಿ ಹೇಮಲತಾ ಎಂ. ಆರ್, ರಾಜ್ಯ ಸಹಾಯಕ ಸಂಘಟನಾ ಆಯುಕ್ತಾರಾದ ಶ್ರೀ ಭರತ್ ರಾಜ್ ಕೆ, ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಬನ್ನಿಸ್ ,ಕಬ್, ಬುಲ್ ಬುಲ್ ,ಸ್ಕೌಟ್, ಗೈಡ್ ವಿದ್ಯಾರ್ಥಿಗಳು ಬೆಂಕಿ ಇಲ್ಲದ ಅಡುಗೆ ಯನ್ನು ತಯಾರಿಸಿದರು. ತಾವೇ ತಯಾರಿಸಿದ ರುಚಿಯನ್ನು ಸವಿದ ವಿದ್ಯಾರ್ಥಿಗಳು ಸ್ಕೌಟಿಂಗ್ ಚಟುವಟಿಕೆ ಯನ್ನು ಆನಂದಿಸಿದರು. ಬನ್ನಿ ಸ್ ವಿದ್ಯಾರ್ಥಿಗಳು ಸ್ಕೌಟ್ ಗೈಡ್ ಸಹೋದರ ಸಹೋದರಿಯರೊಂದಿಗೆ ಸ್ಯಾಂಡ್ ವಿಚ್ ಅನ್ನು ತಯಾರಿಸಿದರು.

ಶ್ರೀಮತಿ ಪ್ರಮೀಳಾ ರವರ ನೇತೃತ್ವದಲ್ಲಿ , ಗೈಡ್ ಕ್ಯಾಪ್ಟನ್ ಕಾರುಣ್ಯ ರವರ ಮಾರ್ಗದರ್ಶನದೊಂದಿಗೆ , ಮಂಜುನಾಥ ಸಹಕರಿಸಿದರು. ಕಾರ್ಯಕ್ರಮದ ನಿರೂಪಣೆಯಲ್ಲಿ ಸ್ಕೌಟ್ ವಿದ್ಯಾರ್ಥಿ ಆಶಿಷ್ ಆರ್ ಕಾಮತ್, ಸ್ವಾಗತದಲ್ಲಿ ಗೈಡ್ ವಿದ್ಯಾರ್ಥಿ ಪ್ರಾಪ್ತಿ , ವಂದನಾರ್ಪಣೆಯನ್ನು ಗೈಡ್ ವಿದ್ಯಾರ್ಥಿ ಅನಘ ಮರಾಠೆ ಸಹಕರಿಸಿ ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಿದರು.
