Sun. Feb 23rd, 2025

Kasaragod: ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ ಪತಿ – ಪತಿ ಅರೆಸ್ಟ್!!

ಕಾಸರಗೋಡು:(ಫೆ.17) ಪತ್ನಿಯನ್ನು ಕೊಲೆಗೈಯಲು ಯತ್ನಿಸಿದ ಪತಿ ಅರೆಸ್ಟ್ ಆಗಿರುವ ಘಟನೆ ಬದಿಯಡ್ಕದಲ್ಲಿ ನಡೆದಿದೆ.

ಇದನ್ನೂ ಓದಿ: ಬಂಟ್ವಾಳ: ಬಾಲಕಿಗೆ ಲೈಂಗಿಕ ಕಿರುಕುಳ


ಬೇಳ ಕುಂಜಾರು ನಿವಾಸಿ ಕೆ.ಎ. ಖೈರುನ್ನೀಸ (37) ಅವರಿಗೆ ಅವರ ಪತಿ ಅಬ್ದುಲ್ ರಹ್ಮಾನ್ ಹಲ್ಲೆಗೈದು‌, ಕುತ್ತಿಗೆಗೆ ಬಿಗಿದು ಕೊಲೆಗೆ ಯತ್ನಿಸಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಅಬ್ದುಲ್ ರಹ್ಮಾನ್‌ನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.


ಕಳೆದ ಬುಧವಾರ ಮುಂಜಾನೆ 2 ಗಂಟೆಗೆ ಕೊಲೆಗೈಯ್ಯಲು ಯತ್ನಿಸಿದ್ದಾಗಿ ನೀಡಿದ ದೂರಿನಂತೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ ನ್ಯಾಯಾಲಯ ಜಾಮೀನು ನೀಡಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *