ಉಜಿರೆ :(ಫೆ.17) ದೇವಾಲಯ ಊರಿನ ಸೌಂದರ್ಯವನ್ನು ಹೆಚ್ಚಿಸುತ್ತೆ. ಅದೇ ರೀತಿ ದೇವಾಲಯದ ಮುಂಭಾಗ ರಾಜಗೋಪುರ ನಿರ್ಮಾಣ ಆದರೆ ಆ ದೇವಾಲಯದ ಸೌಂದರ್ಯ ಹೆಚ್ಚುತ್ತದೆ ಎಂದು ಶ್ರೀ ಶಂಕರ ಸಂಸ್ಥಾನ ಶ್ರೀ ಎಡನೀರು ಮಠ, ಕಾಸರಗೋಡು ಇದರ ಜಗದ್ಗುರು , ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀ ಪಾದಂಗಳವರು ಹೇಳಿದರು. ಉಜಿರೆ ಜನಾರ್ದನ ದೇವಸ್ಥಾನದ ರಾಜ ಗೋಪುರ ಶಿಲಾನ್ಯಾಸದ ಬಳಿಕ ಅವರು ಮಾತನಾಡಿದರು. ಶಿಲ್ಪಶಾಸ್ತ್ರಗಳಿಗೆ ಅನುಗುಣವಾಗಿ ದೇವಸ್ಥಾನ ಪರಿಪೂರ್ಣವಾಗಬೇಕಾದರೆ ಎಲ್ಲ ಭಾಗಗಳು ಅದರಲ್ಲಿ ಇರಬೇಕು. ಈ ಪೈಕಿ ರಾಜಗೋಪುರ ಅತೀ ಮುಖ್ಯ ಎಂದರು.

ಇದನ್ನೂ ಓದಿ: ಕಾರ್ಕಳ: ಮೂರು ತಿಂಗಳ ಗಂಡು ಮಗುವನ್ನು ಬಲಿ ಪಡೆದ ಕಫ
ದೇವಸ್ಥಾನಕ್ಕೆ ಪ್ರವೇಶ ಮಾಡಲು ಭಕ್ತರಿಗೆ ಸಮಸ್ಯೆ ಇರುವ ಸಂದರ್ಭ , ರಾಜಗೋಪುರದ ಮುಂದೆ ಪ್ರಾರ್ಥನೆ ಮಾಡಿದರೆ ಆ ಪ್ರಾರ್ಥನೆ ದೇವರಿಗೆ ಸಲ್ಲುತ್ತೆ ಇಂದು ನಾನು ನಂಬಿದ್ದೇನೆ ಎಂದರು. ಉಜಿರೆ ಪೇಟೆಗೆ ಕಳಶಪ್ರಾಯದಂತೆ ಉಜಿರೆ ಜನಾರ್ದನ ದೇವಸ್ಥಾನ ಇದೆ . ಈ ದೇವಸ್ಥಾನಕ್ಕೆ ರಾಜಗೋಪುರ ನಿರ್ಮಾಣ ಆಗುತ್ತಿರುವುದು ಆಸ್ತಿಕ ಬಂಧುಗಳಿಗೆ ಸಂತೋಷದ ಸಂಗತಿ. ಆದಷ್ಟು ಬೇಗ ರಾಜಗೋಪುರ ನಿರ್ಮಾಣ ಆಗಲಿ. ದೇವರ ಅನುಗ್ರಹ ಸಿಗಲಿ ಎಂದು ಹಾರೈಸಿದರು. ಬಳಿಕ ಮಾತನಾಡಿದ ಡಿ. ಹರ್ಷೇಂದ್ರ ಕುಮಾರ್ ಅವರು, 60 ಇಸವಿಯಿಂದ ನಾವು ಈ ಉಜಿರೆಯನ್ನು ನೋಡಿರುವ ಸಾಕ್ಷಿದಾರರು. ಹೇಗಿತ್ತು ಹೇಗೆ ಈಗ ಹೇಗೆ ಆಗಿದೆ ಅನ್ನೋದಕ್ಕೆ ನಾವು ಸಾಕ್ಷಿದಾರರು.
ಈ ಬೆಳವಣಿಗೆಗೆ ಕಾರಣ ಶ್ರೀ ಕ್ಷೇತ್ರ ಧರ್ಮಸ್ಥಳದ ವಿದ್ಯಾ ಸಂಸ್ಥೆಗಳು. ಎಲ್ಲಿ ವಿದ್ಯಾ ಸಂಸ್ಥೆಗಳು ಇರುತ್ತವೋ ಅಲ್ಲಿ ವ್ಯವಹಾರಗಳು ಅಭಿವೃದ್ಧಿ ಆಗುತ್ತೆ. ಅದೇ ರೀತಿ ಜನಾರ್ದನ ದೇವಸ್ಥಾನದಲ್ಲೂ ಕೂಡ ಅನೇಕ ಬದಲಾವಣೆಗಳು ಆಗಿದೆ ಎಂದರು. ವಿಜಯ ರಾಘವ ಪಡ್ವೆಟ್ನಾಯ ಅವರ ಕನಸನ್ನು ನನಸು ಮಾಡುವಲ್ಲಿ ಶರತ್ ಕೃಷ್ಣ ಪಡ್ವೆಟ್ನಾಯ ಮಾಡುತ್ತಿದ್ದಾರೆ. ಎಂಜಿನಿಯರ್ ಬಳಿ ನಾನು ಮನವಿ ಮಾಡುತ್ತೇನೆ 11 ತಿಂಗಳಲ್ಲಿ ಈ ಕಾರ್ಯ ಮುಗಿಸುವ ಹಾಗೆ ಆಗ್ಬೇಕು , ಈ ಮೂಲಕ ಮುಂದಿನ ವರ್ಷ ಬ್ರಹ್ಮ ಕಲಶೋತ್ಸವ, ವಿಜಯ ಗೋಪುರ ಲೋಕಾರ್ಪಣೆ, ಬ್ರಹ್ಮ ರಥ ದೇವರಿಗೆ ಅರ್ಪಣೆ ಕಾರ್ಯ ಆಗಲಿ ಎಂದು ಹಾರೈಸಿದರು.

ಬಳಿಕ ಮಾತನಾಡಿದ ಶಾಸಕ ಹರೀಶ್ ಪೂಂಜ , ವಿಜಯರಾಘವ ಪಡ್ವೆಟ್ನಾಯ ಅವರನ್ನು ಇಡೀ ಕರ್ನಾಟಕದಲ್ಲಿ ಗೊತ್ತಿಲ್ಲದವರು ಯಾರೂ ಇಲ್ಲ. ಯಾಕೆಂದರೆ ಅವರು ನಮ್ಮ ದೇವರಾಗಿದ್ದರು ಎಂದರು ಈ ಸಂದರ್ಭ ಶಾಸಕ ಹರೀಶ್ ಪೂಂಜ, ವಿಜಯ ರಾಘವ ಅವರನ್ನು ನೆನೆದರು. ರಾಜಗೋಪುರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ಮೂಲಕ ಊರಿನ ಜನರಿಗೆ ಸಂತೋಷ ತಂದಿದೆ ಎಂದರು. ಮಹಾಕುಂಭ ಮೇಳದ ಈ ಸಂದರ್ಭದಲ್ಲಿ ವಿಜಯ ಗೋಪುರ ನಿರ್ಮಾಣದ ಶಿಲಾನ್ಯಾಸ ಆಗಿದೆ ಇದು ಇತಿಹಾಸದ ಪುಟದಲ್ಲಿ ಉಳಿಯಲಿದೆ ಎಂದರು.

ಶಶಿಧರ್ ಶೆಟ್ಟಿ ಅವರು ಅಧ್ಯಕ್ಷರಾದರೆ ಎಲ್ಲ ಕೆಲಸ ವೇಗ ಪಡೆದುಕೊಳ್ಳುತ್ತೆ ಹೀಗಾಗಿ ಅವರ ನೇತೃತ್ವದಲ್ಲಿ 12 ಅಲ್ಲ 10 ತಿಂಗಳಲ್ಲಿ ರಾಜಗೋಪುರ ನಿರ್ಮಾಣ ಆಗಲಿದೆ ಎಂದರು . ತಂದೆಯಂತೆ ಮಗ ಅದು ನಮ್ಮ ಶರತ್ ಕೃಷ್ಣ ಪಡ್ವೆಟ್ನಾಯರು ಸಾಗುತ್ತಿದ್ದಾರೆ ಎಂದರು. ಬಳಿಕ ಮಾತನಾಡಿದ ಸಮಿತಿ ಅಧ್ಯಕ್ಷರಾದ ಶಶಿಧರ ಶೆಟ್ಟಿ ಬರೋಡಾ, ಕೃಷ್ಣನ ಬಳಿ ನಾವು ಯಾವುದೂ ಕೇಳಬೇಕು ಅಂತ ಇಲ್ಲ . ಆ ದೇವರೇ ಎಲ್ಲವನ್ನೂ ಕರುಣಿಸುತ್ತಾರೆ ಅದೇ ರೀತಿ, ಈ ಪುಣ್ಯ ಕೆಲ್ಸದಲ್ಲಿ ಭಾಗಿಯಾದರೆ ಸಾಕು ಹೇಗೆ ಶ್ರೀಕೃಷ್ಣ ಯಾವುದು ಕೇಳದೆ ಕೊಡುತ್ತಾರೋ ಅದೇ ರೀತಿ ಇಲ್ಲಿಯೂ ಶ್ರೀ ಕೃಷ್ಣನ ಅನುಗ್ರಹ
ಆಗಿದೆ ರಾಜಗೋಪುರಕ್ಕೆ ಈಗಾಗಲೇ 2 ಕೋಟಿಗೂ ಹೆಚ್ಚು ಮೊತ್ತ ಬಂದಿದೆ ಎಂದರು. ವಿಜಯ ರಾಘವ ಪಡ್ವೆಟ್ನಾಯ ಇದುವರೆಗೆ ಧಣಿಗಳಂತೆ ವರ್ತಿಸಿಯೇ ಇಲ್ಲ. ರಾಜಗೋಪುರವನ್ನು ವಿಜಯಗೋಪುರವಾಗಿ ಹೆಸರು ಇಟ್ಟಿದ್ದು ಸಂತೋಷವಾಗಿದೆ. ಆದಷ್ಟು ಬೇಗ ವಿಜಯ ಗೋಪುರ ನಿರ್ಮಾಣವಾಗಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು. ಬಂದ ಅತಿಥಿಗಳಿಗೆ ಅನುವಂಶಿಕ ಆಡಳಿತ ಮೊಕ್ತೇಸರರು ಶರತ್ ಕೃಷ್ಣ ಪಡ್ವೆಟ್ನಾಯ ಸ್ವಾಗತ ಕೋರಿದರು.

ಬ್ರಹ್ಮರಥ ಘೋಷಣೆ..!!
ಇದೇ ಸಂದರ್ಭ ಜನಾರ್ದನ ದೇವಸ್ಥಾನಕ್ಕೆ ಬ್ರಹ್ಮರಥ ಸಮರ್ಪಣೆ ಮಾಡುವುದಾಗಿ ಉಜಿರೆ ಮೂಲದ ಅಮೆರಿಕದಲ್ಲಿ ವಾಸಿಸುತ್ತಿರುವ ಕಿರಣ್ ರಾವ್ ಘೋಷಣೆ ಮಾಡಿರುವ ಬಗ್ಗೆ ಶರತ್ ಕೃಷ್ಣ ಪಡ್ವೆಟ್ನಾಯ ತಿಳಿಸಿದರು.
ಸುಮಾರು 4 ಕೋಟಿ ವೆಚ್ಚದಲ್ಲಿ ನಿರ್ಮಾಣ .!
ವಿಜಯ ಗೋಪುರ ಸುಮಾರು 4 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು , 2026ರ ಬ್ರಹ್ಮಕಲಶೋತ್ಸವ ಸಂದರ್ಭ ಲೋಕಾರ್ಪಣೆ ಮಾಡುವ ಯೋಜನೆ ಹಾಕಿದ್ದೇವೆ ಎಂದು ಶರತ್ ಕೃಷ್ಣ ಪಡ್ವೆಟ್ನಾಯ ಮಾಹಿತಿ ನೀಡಿದರು.
