Sun. Feb 23rd, 2025

Ujire: ಶ್ರೀ ಜನಾರ್ದನ ದೇವಸ್ಥಾನ ಉಜಿರೆ ಇದರ ರಾಜಗೋಪುರ “ವಿಜಯಗೋಪುರ”ದ ಶಿಲಾನ್ಯಾಸ ಕಾರ್ಯಕ್ರಮ

ಉಜಿರೆ:(ಫೆ.17) ಶ್ರೀ ಜನಾರ್ದನ ದೇವಸ್ಥಾನ ಉಜಿರೆ ಇದರ ವಿಜಯಗೋಪುರ ಶಿಲಾನ್ಯಾಸವನ್ನು ವೈದಿಕ ವಿಧಿ ವಿಧಾನಗಳ ಮೂಲಕ ಶ್ರೀ ಶಂಕರ ಸಂಸ್ಥಾನ ಶ್ರೀ ಎಡನೀರು ಮಠ, ಕಾಸರಗೋಡು ಇದರ ಜಗದ್ಗುರು , ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀ ಪಾದಂಗಳವರು ನೆರವೇರಿಸಿದರು.

ಇದನ್ನೂ ಓದಿ: ಕಾರ್ಕಳ : ಚಾರ್ಜ್ ಗಿಟ್ಟ ಮೊಬೈಲ್ ಸ್ಫೋಟ

ಇದೇ ವೇಳೆ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ , ಶಾಸಕ ಹರೀಶ್ ಪೂಂಜ, ರಾಜಗೋಪುರ ನಿರ್ಮಾಣ ಸಮಿತಿ ಅಧ್ಯಕ್ಷರಾದ ಶಶಿಧರ ಶೆಟ್ಟಿ ಬರೋಡಾ , ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯ , ವಿಧಾನ ಪರಿಷತ್‌ ಸದಸ್ಯ ಹರೀಶ್ ಕುಮಾರ್ ಮತ್ತಿತರು ಶಿಲಾನ್ಯಾಸ ಕಾರ್ಯದಲ್ಲೂ ಭಾಗಿಯಾಗಿದ್ದರು. ವಿಜಯ ಗೋಪುರ ಸಮಿತಿ ಸದಸ್ಯರು, ಊರಿನ ಸಮಸ್ತರು ಜೊತೆಗಿದ್ದರು.

ಅತಿಥಿಗಳಿಗೆ ಭವ್ಯ ಸ್ವಾಗತ.!


ಉಜಿರೆ ಜನಾರ್ದನ ದೇವಸ್ಥಾನದ ಮುಖ್ಯ ದ್ವಾರದಿಂದ ಅತಿಥಿಗಳನ್ನು ಚೆಂಡೆ , ಕಲಶ ಮೂಲಕ ಸ್ವಾಗತಿಸಲಾಯಿತು. ಶಿಲಾನ್ಯಾಸಕ್ಕೂ ಮೊದಲು ಅತಿಥಿಗಳು ಶ್ರೀ ಜನಾರ್ದನ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

Leave a Reply

Your email address will not be published. Required fields are marked *