ಮುಂಡಾಜೆ(ಫೆ.19) ಶ್ರೀ ಉಳ್ಳಾಯ-ಉಳ್ಳಾಲ್ತಿ ಕಟ್ಟೆಯ ಕಾಣಿಕೆ ಡಬ್ಬಿಯನ್ನು ಒಡೆದು ಹಣ ಕಳ್ಳತನ ಮಾಡಿದ ಘಟನೆ ನಡೆದಿದೆ.

ಇದನ್ನೂ ಓದಿ: ಬಂಟ್ವಾಳ: ಶಾಲಾ ಶಿಕ್ಷಕಿಯರ ನಡುವೆ ಮನಸ್ತಾಪ
ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಚಿಬಿದ್ರೆ- ಮುಂಡಾಜೆ ಗಡಿ ಭಾಗದ ರಸ್ತೆ ಬದಿ ಇರುವ ಶ್ರೀ ಉಳ್ಳಾಯ-ಉಳ್ಳಾಲ್ತಿ ಕಟ್ಟೆಯ ಕಾಣಿಕೆ ಡಬ್ಬಿಯಿಂದ ಹಣ ಕಳವಾಗಿದೆ.




ವಾರಕ್ಕೆ ಒಮ್ಮೆ ಕಾಣಿಕೆ ಡಬ್ಬಿಯಿಂದ ಸಮಿತಿಯವರು ಹಣ ಸಂಗ್ರಹಿಸುತ್ತಿದ್ದರು. ಸುಮಾರು 3 ಸಾವಿರ ರೂ.ಗಿಂತ ಅಧಿಕ ಕಾಣಿಕೆ ಜಮೆಯಾಗುತ್ತಿತ್ತು. ಕಳೆದ ನಾಲ್ಕು ದಿನಗಳ ಹಿಂದೆ ಹಣ ಸಂಗ್ರಹಿಸಿದ್ದು, 2 ಸಾವಿರ ರೂ.ಗಿಂತ ಅಧಿಕ ಹಣ ಕಳ್ಳತನವಾಗಿರಬಹುದು ಎಂದು ಮುಖ್ಯಸ್ಥ ಗಣೇಶ ಬಂಗೇರ ತಿಳಿಸಿದ್ದಾರೆ.
