Guruprasad Audio Leaked:(ಫೆ.20) ನಿರ್ದೇಶಕ ಗುರುಪ್ರಸಾದ್ ನಿಧನ ಹೊಂದಿ ಕೆಲ ತಿಂಗಳುಗಳಾಗಿವೆ. ಆರ್ಆರ್ ನಗರದ ತಮ್ಮ ನಿವಾಸದಲ್ಲಿ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದರು.

ಗುರುಪ್ರಸಾದ್ ಸಾವಿಗೆ ಮಾಡಿಕೊಂಡಿದ್ದ ಸಾಲಗಳು ಕಾರಣ ಎನ್ನಲಾಗಿತ್ತು. ಇದೀಗ ಗುರುಪ್ರಸಾದ್ ಅವರು ಸಾವಿಗೆ ಮುಂಚೆ ಅವರ ಪತ್ನಿಯೊಡನೆ ಆಡಿದ್ದ ಮಾತಿನ ಆಡಿಯೋ ವೈರಲ್ ಆಗಿದೆ.


ಪತ್ನಿಯೊಡನೆ ಫೋನ್ನಲ್ಲಿ ಜಗಳವಾಡಿದ್ದ ಗುರುಪ್ರಸಾದ್, ನಿನಗೆ, ಮಗಳಿಗೆ ಏನಾದರೂ ಸ್ವಲ್ಪ ಹಣ ಮಾಡಿ ಸತ್ತು ಹೋಗಿಬಿಡುತ್ತೇನೆ ಎಂದಿದ್ದರು. ಆ ಫೋನ್ ಕಾಲ್ನಲ್ಲಿ ಪದೇ ಪದೇ ಗುರುಪ್ರಸಾದ್ ಸಾಯುವ ಮಾತನಾಡಿದ್ದರು.


