ಉಜಿರೆ:(ಫೆ.20) ಉಜಿರೆಯ ಅರಿಪ್ಪಾಡಿ ಸಂಸ್ಥಾಪಕರಾದ ಬಾಲಕೃಷ್ಣ ಅರಿಪಡಿತ್ತಾಯ(83 ವ) ರವರು ಇಂದು(ಫೆ.20) ನಿಧನ ಹೊಂದಿದ್ದಾರೆ.

ಇದನ್ನೂ ಓದಿ: ಬೆಳ್ತಂಗಡಿ: ಬೆಳ್ತಂಗಡಿ ಮತ್ತು ಪುತ್ತೂರು ಮುಳಿಯದಲ್ಲಿ “ಜೆಮ್ ಸ್ಟೋನ್” ಉತ್ಸವದ ಸಂಭ್ರಮ
ಬಾಲಕೃಷ್ಣ ಅರಿಪಡಿತ್ತಾಯರವರು ಗ್ರಾಮಲೆಕ್ಕಾಧಿಕಾರಿಯಾಗಿ ನಿಡ್ಲೆ, ಮುಂಡಾಜೆಯಲ್ಲಿ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಿ, ನಿವೃತ್ತಿ ಹೊಂದಿದ ನಂತರ ತನ್ನಿಂದ ಏನಾದರೂ ಇತರರಿಗೆ ಸಹಾಯವಾಗಬೇಕು,


ತಾನೂ ಏನಾದರೂ ಅವರಿಗೆ ಪ್ರಯೋಜನ ಆಗುವ ರೀತಿ ಮಾಡಬೇಕು ಎಂದು ಸ್ವತಃ ತಮ್ಮ ಮುಂದಾಲೋಚನೆಯಿಂದ ಉಜಿರೆಗೆ ಒಂದು ಮಾದರಿಯಾಗುವಂತೆ ಭಾರತದ ಪ್ರಾಚೀನ “ಅತಿಥಿ ದೇವೋ ಭವ” ಎನ್ನುವ ಗಾದೆಯಂತೆ ಅರಿಪ್ಪಾಡಿ ಮಠ ಲಾಡ್ಜ್ ಅನ್ನು ಸ್ಥಾಪಿಸಿದರು. ಇದರಿಂದಾಗಿ ಉಜಿರೆಯ ಒಂದು ರೂಪುರೇಷೆಯೇ ಬದಲಾಯಿತು. ಲಾಡ್ಜ್ ಗೆ ಬರುವಂತಹ ಗ್ರಾಹಕರನ್ನು ಅತಿಥಿಗಳಂತೆಯೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಗ್ರಾಹಕರಿಗೆ ನಿಷ್ಕಲ್ಮಶ ಪ್ರೀತಿಯನ್ನು ನೀಡುತ್ತಿದ್ದರು.


ಬಾಲಕೃಷ್ಣ ಅರಿಪಡಿತ್ತಾಯರವರು ಶಿಸ್ತಿನ ಸಿಪಾಯಿ, ಅಗಾಧ ಜ್ಞಾನವುಳ್ಳವರು ಹಾಗೂ ಯುವ ಉದ್ಯಮಿಗಳಿಗೆ ಸ್ಫೂರ್ತಿದಾಯಕರಾಗಿದ್ದರು. ಒಬ್ಬ ಒಳ್ಳೆಯ ಮಾರ್ಗದರ್ಶನ ನೀಡಿದ ವ್ಯಕ್ತಿ ನಮ್ಮನ್ನಗಲಿರುವುದು ದುಃಖಕರ ಸಂಗತಿಯಾಗಿದೆ.
