ಚಿಕ್ಕಬಳ್ಳಾಪುರ:(ಫೆ.21) ಮಹಿಳೆಯೊಬ್ಬರನ್ನು ಕಿಡ್ನಾಪ್ ಮಾಡಿ ಅವರ ಕಣ್ಣು ಗುಡ್ಡೆ ಕಿತ್ತು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಯೊಂದು ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಇದನ್ನೂ ಓದಿ: ನೆಲ್ಯಾಡಿ : ಬೆಂಗಳೂರಿನಲ್ಲಿ ಬೈಕ್ ಅಪಘಾತ
ತೋಟದ ಮನೆಯಲ್ಲಿ ಮಹಿಳೆಯನ್ನು ಕೂಡಿಹಾಕಿ ಭೀಕರವಾಗಿ ಹಲ್ಲೆ ನಡೆಸಲಾಗಿದೆ. ಬ್ಯಾಟ್, ರಾಡ್ ಗಳಿಂದ ಮುಖಕ್ಕೆ ಹೊಡೆದು ಹಲ್ಲೆ ನಡೆಸಲಾಗಿದೆ. ಈ ಘಟನೆ ಗುಡಿಬಂಡೆ ತಾಲೂಕಿನ ಜಗನಹಳ್ಳಿ ಗ್ರಾಮದಲ್ಲಿ ನಡೆದಿದ್ದು,
ಗಂಗರಾಜು ಎಂಬುವವರ 2 ನೇ ಪತ್ನಿ ಸಂಗೀತ ಮೇಲೆ ಹಲ್ಲೆ ನಡೆದಿದೆ. ಮೊದಲು ಹೆಂಡತಿ ಕಡೆಯವರು ಈ ಕೃತ್ಯ ಎಸಗಿದ್ದಾರೆ ಎಂದು ಸಂಗೀತ ಆರೋಪಿಸಿದ್ದಾರೆ.



ಬೆಂಗಳೂರಿನಲ್ಲಿ ಮೂರು ತಿಂಗಳ ಹಿಂದೆ ಗಂಗರಾಜು ಸಂಗೀತ ಅವರನ್ನು ಎರಡನೇ ಮದುವೆ ಆಗಿದ್ದರು. ಗಂಗರಾಜು ಸಂಬಂಧಿ ರಾಜಮ್ಮ ಕಡೆಯವರಿಂದ ಸಂಗೀತ ಮೇಲೆ ಹಲ್ಲೆ ನಡೆಸಲಾಗಿದೆ.

ರಾತ್ರಿ ಸಂಗೀತ ತಂದೆ ಹಾಗೂ ಸಹೋದರಿಯರ ಜೊತೆಗೆ ಕೂಡ ಈ ಒಂದು ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ. ಸಂಗೀತ ಸಹೋದರಿ ಹಂಸ ಮೇಲೆ ಕೂಡ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
