ಮಾಣಿ :(ಫೆ.21) ಅಹ್ಲ್ ಸುನ್ನತ್ ವಲ್ ಜಮಾಅತ್ ಎಂಬ ಅಲ್ಲಾಹನ ದೀನನ್ನು ವಿಕೃತ ವಾದಗಳ ಮೂಲಕ ನಾಶ ಪಡಿಸುತ್ತಿರುವ ನೂತನವಾದಿಗಳ ಎಲ್ಲಾ ಮುಖವಾಡ ಕಳಚುವಲ್ಲಿ ಸುನ್ನೀ ಸಂಘಟನಾ ಕಾರ್ಯ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತಿದೆ ಬಡ ಸುನ್ನೀಗಳು ಈಮಾನ್ ತಪ್ಪದಂತೆ ಭದ್ರವಾಗಿ ನೆಲೆ ನಿಲ್ಲುವಲ್ಲಿಯೂ ಸಹಕಾರಿಯಾಗುತ್ತಿದೆ ಎಂದು ಝೋನ್ ನಾಯಕರಾದ ಬಹು|ಬದ್ರುಲ್ ಮುನೀರ್ ಹನೀಫಿ ಅರಿಕ್ಕಿಲ,ಮಾಡಾವು ಹೇಳಿದರು ಅವರು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್‌ವೈಎಸ್ ಮಾಣಿ ಸರ್ಕಲ್ ಸಮಿತಿಯ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮುಖ್ಯ ತರಗತಿ ನಡೆಸಿಕೊಟ್ಟರು.

ಇದನ್ನೂ ಓದಿ: ಗುರುವಾಯನಕೆರೆ: ವಾರ್ಷಿಕ “ದಿಕ್ರ್ ಹಲ್ಖಾ” ಕಾರ್ಯಕ್ರಮ
ಪಾಟ್ರಕೋಡಿ ತಾಜುಲ್ ಉಲಮಾ ಸುನ್ನೀ ಸೆಂಟರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೈದರ್ ಸಖಾಫಿ ಶೇರಾ ದುಆ ಮಾಡಿ ಅಧ್ಯಕ್ಷೀಯ ಭಾಷಣ ಮಾಡಿದರು,ಪ್ರಧಾನ ಕಾರ್ಯದರ್ಶಿ ಸಲೀಂ ಮಾಣಿ ಸ್ವಾಗತಿಸಿ ವರದಿ ಮತ್ತು ಲೆಕ್ಕಪತ್ರ ಮಂಡಿಸಿ ಸಭೆಯ ಅನುಮೋದನೆ ಪಡೆದರು,ಬಳಿಕ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸರ್ಕಲ್ ಸಮಿತಿ ರಚಿಸಲಾಯಿತು.

ಅದರಂತೆ ಅಧ್ಯಕ್ಷರಾಗಿ ರಫೀಕ್ ಮದನಿ ಪಾಟ್ರಕೋಡಿ, ಉಪಾಧ್ಯಕ್ಷರಾಗಿ ಕಲಂದರ್ ಬುಡೋಳಿ,ಪ್ರಧಾನ ಕಾರ್ಯದರ್ಶಿಯಾಗಿ ಫಾರೂಕ್ ಹನೀಫಿ ಪರ್ಲೊಟ್ಟು,ಕೋಶಾಧಿಕಾರಿಯಾಗಿ ಸಂಶುದ್ದೀನ್ ಮಿತ್ತೂರು,ದಅವಾ ಕಾರ್ಯದರ್ಶಿಯಾಗಿ ಕಾಸಿಂ ಮುಸ್ಲಿಯಾರ್ ಸೂರ್ಯ, ಸಂಘಟನಾ ಕಾರ್ಯದರ್ಶಿಯಾಗಿ ಸಾಜಿದ್ ಪಾಟ್ರಕೋಡಿ, ಇಸಾಬಾ ಮತ್ತು ಸಾಂತ್ವನ ವಿಭಾಗದ ಕಾರ್ಯದರ್ಶಿಯಾಗಿ ಜಲೀಲ್ ಮುಸ್ಲಿಯಾರ್ ಕೊಡಾಜೆ, ಪುತ್ತೂರು ಝೋನ್ ಕೌನ್ಸಿಲರ್ ಗಳಾಗಿ ಹೈದರ್ ಸಖಾಫಿ ಶೇರಾ,


ಸಲೀಂ ಮಾಣಿ, ಮನ್ಸೂರ್ ಕಲ್ಲಡ್ಕ, ಮಜೀದ್ ಪಾಟ್ರಕೋಡಿ, ಜಲೀಲ್ ಮುಸ್ಲಿಯಾರ್, ಕಾಸಿಂ ಮುಸ್ಲಿಯಾರ್, ರಫೀಕ್ ಮದನಿ, ಸಾಜಿದ್ ಪಾಟ್ರಕೋಡಿ, ಸಂಶುದ್ದೀನ್ ಮಿತ್ತೂರು, ಫಾರೂಕ್ ಹನೀಫಿ ಯವರನ್ನು ಆರಿಸಲಾಯಿತು, ದ.ಕ ಜಿಲ್ಲಾ ಮುಸ್ಲಿಂ ಜಮಾಅತ್ ನಾಯಕರಾದ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ ಶುಭಹಾರೈಸಿದರು.

ಪ್ರಮುಖರಾದ ಕಾಸಿಂ ಪಾಟ್ರಕೋಡಿ,ಸಿದ್ದೀಕ್ ಝುಹ್ರಿ ಸೂರ್ಯ,ಹಮೀದ್ ಶೇರಾ,ಬಶೀರ್ ಪಾಟ್ರಕೋಡಿ,ಶಾಫಿ ಕೊಡಾಜೆ, ಆಶ್ರಫ್ ಬುಡೋಳಿ, ಇಲ್ಯಾಸ್ ಸಅದಿ ಮಿತ್ತೂರು, ಮುಂತಾದವರು ಉಪಸ್ಥಿತರಿದ್ದರು. ಶಾಹುಲ್ ಹಮೀದ್ ಹಾಜಿ ಕಬಕ ಮತ್ತು ಬದ್ರುಲ್ ಮುನೀರ್ ಹನೀಫಿ ಚುನಾವಣಾ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು, ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿದರು.
