Video Viral:(ಫೆ.21) ದೊಡ್ಡವರಂತೆ ಹದಿಹರೆಯದ ಮಕ್ಕಳು ಕೂಡಾ ಪ್ರೀತಿ ಪ್ರೇಮದ ಬಲೆಗೆ ಸಿಕ್ಕಿ ದಾರಿ ತಪ್ಪುತ್ತಿರುವ ಘಟನೆ ಹೆಚ್ಚಾಗುತ್ತಿದೆ. ಅದರಲ್ಲೂ ಕೆಲ ಪ್ರೇಮಪಕ್ಷಿಗಳು ಎಲ್ಲೆಂದರಲ್ಲಿ ಅತಿರೇಕದ ವರ್ತನೆ ತೋರುತ್ತಿರುತ್ತಾರೆ.

ಇದನ್ನೂ ಓದಿ: ಪಾಳು ಬಿದ್ದ ಮನೆಯಲ್ಲಿ ಪ್ರಿಯಕರನ ಜೊತೆ ಸರಸದಲ್ಲಿರುವಾಗಲೇ ಸಿಕ್ಕಿಬಿದ್ದ ಪತ್ನಿ
ಅದೇ ರೀತಿ ಇಲ್ಲಿಬ್ಬರು ಹೈಸ್ಕೂಲ್ ವಿದ್ಯಾರ್ಥಿಗಳು ನಮ್ಮನ್ನು ಯಾರಾದ್ರೂ ನೋಡ್ತಾರೆ ಅನ್ನೋ ಭಯ, ನಾಚಿಕೆ ಇಲ್ಲದೆ ನಡು ರಸ್ತೆಯಲ್ಲಿಯೇ ರೊಮ್ಯಾನ್ಸ್ ಮಾಡಿದ್ದಾರೆ. ಈ ದೃಶ್ಯವನ್ನು ಕಂಡ ಪಕ್ಕದ ಮನೆ ವ್ಯಕ್ತಿಯೊಬ್ಬರು ಜೋಡಿ ಹಕ್ಕಿಗಳ ಮೇಲೆ ನೀರೆರಚಿದ್ದು ಮಾತ್ರವಲ್ಲದೆ, ಇಲ್ಲೇನ್ ಮಾಡ್ತಿದ್ದೀರಾ ಎಂದು ಗದರಿಸಿ ಚಪ್ಪಲಿ ಎಸೆದು ಅವರನ್ನು ಅಲ್ಲಿಂದ ಒದ್ದೋಡಿಸಿದ್ದಾರೆ. ಈ ಕುರಿತ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
https://www.instagram.com/reel/DGC7cjbIfzA/?utm_source=ig_web_button_share_sheet
ಓಣಿ ರಸ್ತೆಯಲ್ಲಿ ಹೈಸ್ಕೂಲ್ ವಿದ್ಯಾರ್ಥಿಯೊಬ್ಬ ತನ್ನ ಪ್ರೇಯಸಿಯನ್ನು ಎತ್ತಿಕೊಂಡು ರೊಮ್ಯಾನ್ಸ್ ಮಾಡ್ತಾ ನಿಂತಿದ್ದು, ಈ ದೃಶ್ಯವನ್ನು ಕಂಡ ಪಕ್ಕದ ಬಿಲ್ಡಿಂಗ್ ವ್ಯಕ್ತಿಯೊಬ್ಬರು ಅವರಿಬ್ಬರ ಮೇಲೆ ನೀರೆರಚಿ, ಚಪ್ಪಲಿ ಎಸೆದು ಒದ್ದೋಡಿಸಿದ್ದಾರೆ. ಈ ಘಟನೆ ನಿಜವಾಗಿ ನಡೆದದ್ದೋ ಅಥವಾ ವಿಡಿಯೋ ಮಾಡುವ ಸಲುವಾಗಿ ಮಾಡಿದ್ದೋ ಎಂಬ ಮಾಹಿತಿ ಲಭ್ಯವಾಗಿಲ್ಲ.




ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸ್ಕೂಲ್ ಹುಡುಗಿಯೊಬ್ಬಳು ತನ್ನ ಗೆಳತಿಯೊಂದಿಗೆ ಪ್ರೇಮಿಯನ್ನು ಭೇಟಿಯಾಗಲು ಓಣಿ ರಸ್ತೆಗೆ ಬಂದಿರುವ ದೃಶ್ಯವನ್ನು ಕಾಣಬಹುದು. ಹೀಗೆ ಬಂದಾಕೆಗೆ ಆಕೆಯ ಗೆಳೆಯ ಮುತ್ತಿಟ್ಟು, ಆಕೆಯನ್ನು ಎತ್ತಿಕೊಂಡು ರೊಮ್ಯಾನ್ಸ್ ಮಾಡಿದ್ದಾನೆ. ಈ ನಾಚಿಕೆಗೇಡಿನ ದೃಶ್ಯವನ್ನು ಕಂಡು ವ್ಯಕ್ತಿಯೊಬ್ಬರು ಅವರಿಬ್ಬರ ಮೇಲೆ ನೀರೆರಚಿ, ಇಲ್ಲೇನ್ ಮಾಡ್ತಿದ್ದೀರಾ ಎಂದು ಗದರಿಸಿ, ಅವರಿಬ್ಬರ ಮೇಲೆ ಕೋಪದಲ್ಲಿ ಚಪ್ಪಲಿ ಎಸೆದು ಅಲ್ಲಿಂದ ಒದ್ದೋಡಿಸಿದ್ದಾರೆ.
