ಬೆಳ್ತಂಗಡಿ:(ಫೆ.22) ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಸಂಸ್ಥೆ ಆಯೋಜಿಸಿದ ಹಿಮಾಲಯ ವೃಕ್ಷ ಮಣಿದಾರರ ತರಬೇತಿಯಲ್ಲಿ ತೇರ್ಗಡೆ ಹೊಂದಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ,

ಇದನ್ನೂ ಓದಿ: ಶಿರಸಿ: ಶಿರಸಿಯ ಶ್ರೀ ನಾರಾಯಣ ಆರ್ ಕೋಮಾರ್ ರವರಿಂದ ಸೇವಾಧಾಮಕ್ಕೆ ಧನ ಸಹಾಯ
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿಯ ಕಾರ್ಯದರ್ಶಿ ಪ್ರಮೀಳ ಇವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ದೆ ದಯಾನಂದ ಸಾಗರ ಆಡಿಟೋರಿಯಂ ಕುಮಾರಸ್ವಾಮಿ ಲೇಔಟ್ ಬೆಂಗಳೂರಿನಲ್ಲಿ ಆಯೋಜಿಸಿದ

ಹಿಮಾಲಯ ವೃಕ್ಷಮಣಿದಾರರ ಪ್ರಶಸ್ತಿ ಪತ್ರ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಪತ್ರವನ್ನು ಹಾಗೂ ರಾಜ್ಯ ಸಂಸ್ಥೆಯಿಂದ ಸನ್ಮಾನವನ್ನು ಪಡೆದುಕೊಂಡಿರುತ್ತಾರೆ. ರಾಜ್ಯ ಸಂಸ್ಥೆಯಿಂದ ರಾಜ್ಯ ಮುಖ್ಯ ಆಯುಕ್ತರಾದ ಪಿಜಿಆರ್ ಸಿಂಧ್ಯಾ ರವರಿಂದ ಸನ್ಮಾನಿತರಾಗಿರುತ್ತಾರೆ.


ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಗಂಗಪ್ಪಗೌಡ ಹಾಗೂ ಬಸವರಾಜ್, ರಾಜ್ಯ ತರಬೇತಿ ಗೈಡ್ ಆಯುಕ್ತರಾದ ಶ್ಯಾಮಲ , ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಪ್ರಭಾಕರ್ ಭಟ್, ಹೊನ್ನಮ್ಮ, ಕೃಪಾ ಉಪಸ್ಥಿತರಿದ್ದರು.

