Sun. Feb 23rd, 2025

Belthangady: ಮಂದಿರಗಳ ರಕ್ಷಣೆ ದೃಷ್ಟಿಯಿಂದ ಕರ್ನಾಟಕ ಮಂದಿರ ಮಹಾಸಂಘದ ವತಿಯಿಂದ ಮಾನ್ಯ ತಹಶೀಲ್ದಾರರಿಗೆ ಮನವಿ

ಬೆಳ್ತಂಗಡಿ:(ಫೆ.22) ಕರ್ನಾಟಕ ಮಂದಿರ ಮಹಾಸಂಘವು 15 ಫೆಬ್ರವರಿ 2025 ರಂದು ಬೆಳ್ತಂಗಡಿ ಲಾಯಿಲದ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಭಾಭವನದಲ್ಲಿ 1 ದಿನದ ತಾಲೂಕು ಮಟ್ಟದ ಮಂದಿರ ಅಧಿವೇಶನವನ್ನು ಏರ್ಪಡಿಸಲಾಗಿತ್ತು.

ಇದನ್ನೂ ಓದಿ: ಉಜಿರೆ: ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಬ್ಸ್, ಬುಲ್ ಬುಲ್, ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಂದ “ಚಿಂತನಾ ದಿನಾಚರಣೆ”

ಈ ಅಧಿವೇಶನದಲ್ಲಿ 80 ಕ್ಕೂ ಅಧಿಕ ದೇವಸ್ಥಾನಗಳ ವಿಶ್ವಸ್ಥರು, ಅರ್ಚಕರು ಭಾಗವಹಿಸಿದ್ದರು. ದೇವಸ್ಥಾನಗಳ ರಕ್ಷಣೆ ದೃಷ್ಟಿಯಿಂದ ಅಧಿವೇಶನದಲ್ಲಿ ಕೆಲವು ಮುಖ್ಯ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.

ಈ ನಿರ್ಣಯವನ್ನು ಸರಕಾರವು ಅನುಷ್ಠಾನಕ್ಕೆ ತರಬೇಕೆಂದು ಬೆಳ್ತಂಗಡಿ ತಹಶೀಲ್ದಾರರಾದ ಮಾನ್ಯ ಪೃಥ್ವಿ ಸಾನಿಕಂ ಇವರಿಗೆ ಮನವಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಮಂದಿರ ಮಹಾ ಸಂಘದ ತಾಲೂಕಿನ ಸಮನ್ವಯಕರು ಶ್ರೀ ಜಯಸಾಲಿಯಾನ್ ಬಲೆಂಜ, ಶ್ರೀ ಸದಾಶಿವ ಹೊಳ್ಳ ಶ್ರೀ ಗಣಪತಿ ಸುಬ್ರಮಣ್ಯ ದೇವಸ್ಥಾನ ಮಲೆಬೆಟ್ಟು. ಶ್ರೀ ವಾಮನ ಬಾಳಿಗ,ಶ್ರೀ ಮೂಜುಲ್ನಾಯ ಬ್ರಹ್ಮ ದೈವಸ್ಥಾನ ಪಡಂಗಡಿ .

ಶ್ರೀ ಸಂತೋಷ್ ಕುಮಾರ್ ಶ್ರೀ ನಾಗಂಬಿಕಾ ದೇವಸ್ಥಾನ ಮುಂಡೂರು. ಶ್ರೀ ಹರೀಶ ಮುದ್ದಿನಡ್ಕ, ಶ್ರೀ ರಾಮ ಭಜನಾ ಮಂದಿರ ಪೆರಿಯಡ್ಕ. ಹಾಗೂ ಶ್ರೀ ಯೋಗೀಶ್ ಕೆಂಬರ್ಜೆ ಇವರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *