ಕಾಸರಗೋಡು:(ಫೆ.22) ಯುವತಿಗೆ ಹೊಟ್ಟೆನೋವು ಶುರುವಾಗಿದೆ. ಹೊಟ್ಟೆನೋವು ಜಾಸ್ತಿ ಆದ ಕಾರಣ ಆಕೆ ಆಸ್ಪತ್ರೆಗೆ ಹೋಗಿದ್ದಾಳೆ. ಆದ್ರೆ ಆಸ್ಪತ್ರೆಗೆ ಹೋದ ಯುವತಿ ಶಾಕ್ ಗೆ ಒಳಗಾಗಿದ್ದಾಳೆ.

ಇದನ್ನೂ ಓದಿ: ಉಜಿರೆ: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಚಿಂತನಾ ದಿನಾಚರಣೆ
ಗಡ್ಡೆ ತೆರವುಗೊಳಿಸುವ ಶಸ್ತ್ರಚಿಕಿತ್ಸೆಯಲ್ಲಿ ಅಂಡಾಶಯವನ್ನೇ ತೆಗೆದು ಹಾಕಿರುವ ಬಗ್ಗೆ ಯುವತಿ ನೀಡಿರುವ ದೂರಿನ ಮೇರೆಗೆ ಖಾಸಗಿ ಆಸ್ಪತ್ರೆ ವೈದ್ಯೆ ಡಾ.ರೇಷ್ಮಾ ವಿರುದ್ಧ ಪೊಲೀಸರು ಕೇಸು ದಾಖಲು ಮಾಡಿದ್ದಾರೆ.


ಹೊಸದುರ್ಗ ಕೊಳವಯಲ್ ನಿವಾಸಿ ಯುವತಿ ಹೊಟ್ಟೆನೋವೆಂದು ಕ್ಲಿನಿಕ್‌ಗೆ ಬಂದಿದ್ದಳು. ತಪಾಸಣೆ ಸಂದರ್ಭ ಆಕೆಯ ಬಲಭಾಗದ ಅಂಡಾಶಯದಲ್ಲಿ ಗಡ್ಡೆ ಇರುವುದು ಪತ್ತೆಯಾಗಿದೆ.
2021 ಸೆ.27 ರಂದು ವೈದ್ಯರ ಸಲಹೆಯ ಮೇರೆಗೆ ಯುವತಿ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದಳು. ಆದರೆ ತಿಂಗಳ ನಂತರ ಮತ್ತೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಮತ್ತೆ ಅದೇ ವೈದ್ಯರನ್ನು ಸಂಪರ್ಕ ಮಾಡಿದಾಗ ಔಷಧ ನೀಡಿದರೂ ಹೊಟ್ಟೆನೋವು ಕಡಿಮೆ ಆಗಿರಲಿಲ್ಲ.

2024 ರ ಜನವರಿಯಲ್ಲಿ ಸ್ಕ್ಯಾನಿಂಗ್ ಮಾಡಿದಾಗ ಅಂಡಾಶಯವನ್ನೇ ತೆಗೆದಿರುವುದು ಬೆಳಕಿಗೆ ಬಂದಿದೆ. ವೈದ್ಯೆಯನ್ನು ಸಂಪರ್ಕ ಮಾಡಿದರೆ ಊರಲ್ಲಿ ಇಲ್ಲ ಎನ್ನುವ ಉತ್ತರ ದೊರಕಿದೆ. ಈ ಕುರಿತು ಮುಖ್ಯಮಂತ್ರಿ, ಆರೋಗ್ಯ ಸಚಿವರಿಗೆ ದೂರನ್ನು ನೀಡಿದ್ದು, ಆರೋಗ್ಯ ಸಚಿವಾಲಯದ ನಿರ್ದೇಶನದ ಮೇರೆಗೆ ಯುವತಿ ಹೊಸದುರ್ಗ ಠಾಣೆ ಪೊಲೀಸರಿಗೆ ದೂರನ್ನು ನೀಡಿದ್ದಾರೆ.

