ಕೋಲಾರ(ಫೆ.22) : ಅವನು ಬಡತನದಲ್ಲಿ ಹುಟ್ಟಿ ಕಷ್ಟಪಟ್ಟು ಓದಿ ಪದವಿ ಮುಗಿಸಿದ್ದ ಯುವಕ. ಇನ್ನೇನು ಓದಿದ್ದು ಮುಗಿಯಿತು ಕೆಲಸಕ್ಕೆ ಸೇರಿ ಸುಂದರವಾದ ಬದುಕನ್ನು ಕಟ್ಟಿಕೊಳ್ಳುವ ಕನಸು ಕಂಡಿದ್ದ.


ಆದರೆ ಜ್ವರವೆಂದು ಅದೊಂದು ಕ್ಲೀನಿಕ್ ಗೆ ಹೋದ ಯುವಕನಿಗೆ ವೈದ್ಯರು ಕೊಟ್ಟ ಅದೊಂದು ಇಂಜೆಕ್ಷನ್ ಆತನ ಪ್ರಾಣವನ್ನೇ ತೆಗೆದಿರುವಂತಹ ದಾರುಣ ಘಟನೆ ಕೋಲಾರ ತಾಲೂಕು ವಕ್ಕಲೇರಿ ಗ್ರಾಮದಲ್ಲಿ ನಡೆದಿದೆ.



