Sun. Feb 23rd, 2025

Perla: ಕೊಳದಲ್ಲಿ ಬಿದ್ದು ತಾಯಿ ಹಾಗೂ ಎರಡು ವರ್ಷದ ಮಗು ಮೃತ್ಯು

ಪೆರ್ಲ:(ಫೆ.22) ತಾಯಿ ಹಾಗೂ ಎರಡು ವರ್ಷದ ಮಗು ಮನೆಯೊಂದರ ಬಳಿಯಿರುವ ಅಡಿಕೆ ತೋಟದಲ್ಲಿರುವ ಕೊಳದಲ್ಲಿ ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ಮಧ್ಯಾಹ್ನ ಬಳಿಕ ಉಕ್ಕಿನಡ್ಕ ಸಮೀಪದ ಏಳ್ಕಾನದಲ್ಲಿ ನಡೆದಿದೆ.

ಇದನ್ನೂ ಓದಿ: ಬೆಳ್ತಂಗಡಿ: ಬೈಕ್‌ ಸವಾರರ ಮೇಲೆ ಬಿದ್ದ ಕರೆಂಟ್‌ನ ಹೈ ಪವರ್ ಲೈನ್

ಉಕ್ಕಿನಡ್ಕ ಬಳಿಯ ಏಳ್ಕಾನ‌ ದಟ್ಟಿಗೆಮೂಲೆ ನಿವಾಸಿ ಈಶ್ವರ ನಾಯ್ಕರ‌ ಪತ್ನಿ ಪರಮೇಶ್ವರಿ (42), ಪುತ್ರಿ. ಪದ್ಮಿನಿ (2).ಮೃತಪಟ್ಟವರು. ಪತಿ ಈಶ್ವರ ನಾಯ್ಕ ಹಾಗೂ ಪುತ್ರ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು.

ಅವರು ಹಿಂತಿರುಗಿದಾಗ ಈ ದಾರುಣ ಘಟನೆ ‌ಕಂಡು ಬಂದಿದೆ. ಮನೆಯಲ್ಲಿ ಈಶ್ವರ ನಾಯ್ಕರ ಸಹೋದರ ಶಿವಪ್ಪ ನಾಯ್ಕ ಅವರು ಖಾಯಿಲೆಯಿಂದ ಮನೆಯೊಳಗೆ ಮಲಗಿದಲ್ಲಿಯೇ ಇದ್ದರು. ಊರವರು ತಲುಪಿ ಇಬ್ಬರನ್ನು ಮೇಲಕ್ಕೆತ್ತಿ ಕಾಸರಗೋಡು ಆಸ್ಪತ್ರೆಗೆ ತಲುಪಿಸಿದರೂ ಆ ವೇಳೆ‌ ಇಬ್ಬರೂ ಮೃತಪಟ್ಟಿದ್ದರು.

ಮೃತದೇಹ ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಬದಿಯಡ್ಕ ಪೊಲೀಸರು‌ ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *