ಉಜಿರೆ:(ಫೆ.22) ಸ್ಕೌಟ್ಸ್ ಗೈಡ್ಸ್ ಸಂಸ್ಥೆಯ ಸ್ಥಾಪಕರಾದ ಲಾರ್ಡ್ ಬ್ಯಾಡನ್ ಪೊವೆಲ್ ಹಾಗೂ ಲೇಡಿ ಓಲಾನಾ ಬ್ಯಾಡನ್ ಪೊವೆಲ್ ಅವರ ಜನ್ಮ ದಿನದ ಸ್ಮರಣಾರ್ಥವಾಗಿ ಫೆ.22 ಅನ್ನು ಪ್ರತಿವರ್ಷ ಚಿಂತನ ದಿನವನ್ನಾಗಿ ಆಚರಿಸಲಾಗುತ್ತದೆ.

ಇದನ್ನೂ ಓದಿ: ಬೆಳ್ತಂಗಡಿ : ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ 30 ಕಂಪ್ಯೂಟರ್ ವಿತರಣಾ ಕಾರ್ಯಕ್ರಮ
ಶಾಲೆಯಲ್ಲಿ ಕಬ್ಸ್, ಬುಲ್ ಬುಲ್ ವಿದ್ಯಾರ್ಥಿಗಳಿಂದ ಸುಶಾವ್ಯ ಗೀತೆಗಳು ಹಾಗೂ ನೃತ್ಯವನ್ನು ಪ್ರದರ್ಶನ ಮಾಡಿದರು. ಬುಲ್ ಬುಲ್ ವಿದ್ಯಾರ್ಥಿನಿಯಾದ ಕುಮಾರಿ ಆಯುಷಿ ಈ ದಿನದ ಮಹತ್ವವನ್ನು ತಿಳಿಸಿದರು.



ಸ್ಕೌಟ್ ಗೈಡ್ಸ್ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಗೂ ದೇಶಭಕ್ತಿ ಗೀತೆಯನ್ನು ಹಾಡಿದರು. ಪ್ರಾಂಶುಪಾಲರಾದ ವಂದನೀಯ ಫಾ! ವಿಜಯ್ ಲೋಬೊ ಅವರು ಶುಭಹಾರೈಸಿದರು. ಸ್ಕೌಟ್ ವಿದ್ಯಾರ್ಥಿಯಾದ ಅಮೃತ ಹೆಗ್ಡೆ ಇವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

