ಉಪ್ಪಿನಂಗಡಿ: ನವವಿವಾಹಿತನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ನೆಕ್ಕಿಲಾಡಿಯ ಕೊಳಕ್ಕೆ ಎಂಬಲ್ಲಿ ನಡೆದಿದೆ.

ಕೊಳಕ್ಕೆ ನಿವಾಸಿ ದಿ.ಕೃಷ್ಣಪ್ಪ ನಾಯ್ಕ ಎಂಬುವವರ ಪುತ್ರ ಕೇಶವ ಕೆ (28) ಮೃತಪಟ್ಟವರು.ಉಪ್ಪಿನಂಗಡಿ ಯ ವೈನ್‌ಶಾಪ್‌ವೊಂದರಲ್ಲಿ ಉದ್ಯೋಗಿಯಾಗಿದ್ದ ಇವರಿಗೆ ಎರಡು ದಿನಗಳಿಂದ ಜ್ವರವಿದ್ದು,
ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಯೊಂದರಿಂದ ಔಷಧಿ ಪಡೆದುಕೊಂಡಿದ್ದರು. ಶನಿವಾರ ನಸುಕಿನ ಜಾವ ಸುಮಾರು 3 ಗಂಟೆಗೆ ಪತ್ನಿ ಎಚ್ಚರಗೊಂಡು ಗಮನಿಸಿದಾಗ ಹಾಸಿಗೆಯಲ್ಲಿ ಎದ್ದು ಗೋಡೆಗೊರಗಿ ಎದೆಯ ಬಳಿ ತನ್ನ ಕೈಯನ್ನಿಟ್ಟುಕೊಂಡ ಸ್ಥಿತಿಯಲ್ಲಿ ಕಂಡಿದ್ದಾರೆ.


ಮಾತನಾಡಲೆಂದು ಪ್ರಯತ್ನ ಪಟ್ಟಾಗ ಮಾತನಾಡದೇ ಇದ್ದಾಗ ಕೂಡಲೇ ನೆರೆಹೊರೆಯವರ ಸಹಕಾರದೊಂದಿಗೆ ಇವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಆದರೆ ಅಷ್ಟರಲ್ಲಿ ಅವರು ಮೃತ ಹೊಂದಿರುವುದಾಗಿ ವರದಿಯಾಗಿದೆ.ಒಂದು ವರ್ಷದ ಹಿಂದೆ ಇವರಿಗೆ ಮದುವೆಯಾಗಿದ್ದು, ಮೂರು ತಿಂಗಳ ಮಗು ಇದೆ.

