ಬಂದಾರು :(ಫೆ.24) ಕುಂಬಾರರ ಸೇವಾ ಸಂಘ (ರಿ.) ಹಾಗೂ ಜೈ ಶ್ರೀರಾಮ್ ಗೆಳೆಯರ ಬಳಗ (ರಿ.) ಶ್ರೀರಾಮನಗರ ಬಂದಾರು. ಧರ್ಮ ಸಂಸ್ಕಾರ ಶಿಕ್ಷಣ ಇವುಗಳ ಸಂಯುಕ್ತ ಆಶ್ರಯದಲ್ಲಿ ದ.ಕ. ಜಿಲ್ಲಾ ಮಾಗಣೆ ಮಟ್ಟದ ಕುಂಬಾರರ ಬೃಹತ್ ಸಮಾವೇಶ ಕುಂಭಾ ಸಮಾಗಮ, ಸ್ವಜಾತಿ ಬಾಂಧವರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಮತ್ತು ವಿವಿಧ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಫೆ 22 ಬಂದಾರು ಶ್ರೀರಾಮನಗರ ಶಿವಪ್ರಿಯ ಮೈದಾನದಲ್ಲಿ ನಡೆಯಿತು.

ಇದನ್ನೂ ಓದಿ: Belthangady : ಫಲ್ಗುಣಿ ನದಿಗೆ ಕಾಲು ಜಾರಿ ಬಿದ್ದು 10 ನೇ ತರಗತಿ ವಿದ್ಯಾರ್ಥಿ ಸಾವು!!!
ರಾಜ್ಯ ಕುಂಬಾರರ ಮಹಾಸಂಘದ ಅಧ್ಯಕ್ಷರಾದ ಶಿವ ಕುಮಾರ ಚೌಡ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು, ಬಂದಾರು ಕುಂಬಾರರ ಸೇವಾ ಸಂಘ (ರಿ.) ಇದರ ಅಧ್ಯಕ್ಷರಾದ ಕೆಂಚಪ್ಪ ಕುಂಬಾರ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೊಟ್ಯಾಡಿ,
ಯುವ ಉದ್ಯಮಿ ಕಿರಣ್ ಚಂದ್ರ ಡಿ ಪುಷ್ಪಗಿರಿ, ಕರಾವಳಿ ಕುಂಬಾರರ ಯುವ ವೇದಿಕೆ ಮಂಗಳೂರು (ರಿ.) ಇದರ ಸ್ಥಾಪಕ ಅಧ್ಯಕ್ಷರಾದ ಡಾ |ಅಣ್ಣಯ್ಯ ಕುಲಾಲ್, ಬೆಳ್ತಂಗಡಿ ಕುಂಬಾರರ ಯಾನೆ ಮೂಲ್ಯರ ಸೇವಾ ಸಂಘದ ಅಧ್ಯಕ್ಷರಾದ ಹರೀಶ್ ಕಾರಿಂಜ, ನಿವೃತ್ತ ಕಂದಾಯ ಅಧಿಕಾರಿ ಪದ್ಮಕುಮಾರ್.ಹೆಚ್, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ,

ಪುತ್ತೂರು ಕುಂಬಾರರ ಗುಡಿ ಕೈಗಾರಿಕೆ ಸಹಕಾರಿ ಸಂಘ (ರಿ.) ಇದರ ಉಪಾಧ್ಯಕ್ಷರಾದ ದಾಮೋದರ ಕುಲಾಲ್, ಬಂದಾರು ಕೆರೆಮಜಲು ರವೀಂದ್ರ ಪಾoಗಣ್ಣಾಯ, ಬೆಳ್ತಂಗಡಿ ಏಳು ಮಾಗಣೆ ಕುಂಬಾರ ಗುರಿಕಾರರಾದ ಪುಟ್ಟ, ಕುರಿಯಾಳ ಕೊಪ್ಪ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ, ಐದು ಮಾಗಣೆ ಗುರಿಕಾರರಾದ ಗಂಗಾಧರ ಕುಂಬಾರ, ಬಂದಾರು ಶ್ರೀರಾಮ ನಗರ ಗುರಿಕಾರರಾದ ಬಾಬು ಕುಂಬಾರ, ಶೀನಪ್ಪ ಕುಂಬಾರ,

ಬಂದಾರು ಕುಂಬಾರರ ಸೇವಾ ಸಂಘ (ರಿ ) ಇದರ ಕಾರ್ಯದರ್ಶಿ ವಿಶ್ವನಾಥ ಕುಂಬಾರ ಶ್ರೀರಾಮನಗರ, ಜೈ ಶ್ರೀರಾಮ್ ಗೆಳೆಯರ ಬಳಗ (ರಿ.) ಅಧ್ಯಕ್ಷರಾದ ಶ್ರೀಧರ ಬಿ. ಕೆ, ಕಾರ್ಯದರ್ಶಿ ಚಂದ್ರಶೇಖರ ಬಿ. ಕೆ, ಕ್ರೀಡಾಕೂಟದ ಕಾರ್ಯಾಧ್ಯಕ್ಷರಾದ ಉದಯ ಬಿ. ಕೆ, ಕಾರ್ಯದರ್ಶಿ ಪ್ರಕಾಶ್ ಬಿ. ಕೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರಾದ ಪ್ರಶಾಂತ್ ಸುವರ್ಣ ಮರೋಡಿ, ಮೆಸ್ಕಾಂ ಇಲಾಖೆಯ ಸಂದೀಪ್ ಎಂ ಮಿತ್ತೂರು, ಯೋಗ ಶಿಕ್ಷಕ ಕುಶಾಲಪ್ಪ ಎಂ ನೆಕ್ಕರಾಜೆ, ನಿವೃತ್ತ ಸೈನಿಕ ರಮೇಶ್ ಕೊಂಕನೊಟ್ಟು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ, ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆ ಕಣ್ಣಿನ ತಜ್ಞ ವೈದ್ಯರಾದ ಡಾ |ರಮೇಶ್ ಬೆಳ್ತಂಗಡಿ, ರಾಜ್ಯ ಮಟ್ಟದ ಕ್ರೀಡಾಪಟು ಕು. ತೇಜಶ್ವಿನಿ ಪೂಜಾರಿ ಬೊಲ್ಜೆ ಬಂದಾರು, ಹಾಗೂ ಕುಂಬಾರ ಸಮಾಜದ ಸಾಧಕರು,

ರಾಜ್ಯ ಹಾಗೂ ರಾಷ್ಟ ಮಟ್ಟದಲ್ಲಿ ಸಾಧನೆ ಮಾಡಿದ ಬಂದಾರು ಕುಂಬಾರ ಕ್ರೀಡಾ ಸಾಧಕರನ್ನು ಸನ್ಮಾನಿಸಲಾಯಿತು. ವಿವೇಕಾನಂದ ಕಾಲೇಜು ಮುಂಡಾಜೆ ಹಾಗೂ ಬಂದಾರು ಪ್ರಾಥಮಿಕ ಶಾಲೆಯ ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಕ್ರೀಡಾಪಟುಗಳಿಂದ ವಾಲಿಬಾಲ್ ಪ್ರದರ್ಶನ ಪಂದ್ಯಕೂಟ ನಡೆಯಿತು. ಬೆಳಗ್ಗೆ ಗಣಹೋಮ, ಭಜನಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಸ್ವಜಾತಿ ಬಾಂಧವರ ವಾಲಿಬಾಲ್ ಪಂದ್ಯಾಟ ಜರುಗಿತು. ಕ್ರೀಡಾಕೂಟ ಸಮಿತಿ ಕಾರ್ಯಧ್ಯಕ್ಷರಾದ ಉದಯ ಬಿ.ಕೆ ಸ್ವಾಗತಿಸಿ, ವಿಜಯ ಕಾಯರ್ತಡ್ಕ ನಿರೂಪಿಸಿ, ದೀಕ್ಷಾ ವಂದನಾರ್ಪಣೆಗೈದರು.
