Mon. Feb 24th, 2025

Mangaluru: ಹಾಡು ಹಗಲೇ ಮಂಗಳೂರು ಸಬ್ ಜೈಲ್ ನ ಕರ್ಮಕಾಂಡ ಬಟಾಬಯಲು – ಕಾರಾಗೃಹಕ್ಕೆ ಗಾಂಜಾ ಎಸೆದ ಯುವಕರು – ವಿಡಿಯೋ ವೈರಲ್

ಮಂಗಳೂರು :(ಫೆ.24) ಹಾಡು ಹಗಲೇ ಮಂಗಳೂರು ಸಬ್ ಜೈಲ್ ನ ಕರ್ಮಕಾಂಡ ಬಟಾಬಯಲಾಗಿದೆ. ಜೈಲಿನೊಳಗೆ ಮಾದಕ ವಸ್ತು ಪೂರೈಕೆಯಾಗೋ ದೃಶ್ಯ ಸೆರೆಯಾಗಿದೆ. ಮಾಜಿ ಮೇಯರ್ ಕಣ್ಣೆದುರಲ್ಲೇ ಜೈಲಿಗೆ ನಿಷೇಧಿತ ವಸ್ತು ಪೂರೈಕೆಯಾಗಿದೆ.

ಇದನ್ನೂ ಓದಿ: ಬಂದಾರು: ಪೆರ್ಲ ಬೈಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೆಟ್ರಿಕ್ ಮೇಳ


ದ.ಕ. ಜಿಲ್ಲಾ ಕಾರಾಗೃಹಕ್ಕೆ ಬೈಕ್ ನಲ್ಲಿ ಬಂದು ಗಾಂಜಾ ಎಸೆಯುತ್ತಿರುವ ವೀಡಿಯೋ ವೈರಲ್ ಆಗಿದೆ. ಜೈಲಿನ ಹೊರಗಿನಿಂದ ಯುವಕರು ಗಾಂಜಾ ಎಸೆಯುವ ವಿಡಿಯೋ ವೈರಲ್ ಆಗಿದೆ.


ಜೈಲಿನ ಆವರಣದ ಹೊರಗಿನಿಂದ ಒಳಗೆ ಗಾಂಜಿ ಎಸೆಯುವ ಈ ಹಿಂದೆ ಅನೇಕ ಭಾರಿ ಇಂತಹ ಘಟನೆಗಳು ಬೆಳಕಿಗೆ ಬಂದಿತ್ತು. ಗಾಂಜಾ ಎಸೆಯುವ ದೃಶ್ಯ ಕಾರೊಂದರ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಗಾಂಜಾ ಎಸೆದು ಓಡಿದ ಯುವಕರ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಜೈಲಿನಲ್ಲಿ ಅಕ್ರಮ ತಡೆಗಟ್ಟಲು ಭದ್ರತೆ ಹೆಚ್ಚಿಸಲು ಸಾರ್ವಜನಿಕರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು