ಮಂಜೊಟ್ಟಿ :(ಫೆ.24) ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ ರಝಾ ಗಾರ್ಡನ್ ಮಂಜೊಟ್ಟಿ ಇಲ್ಲಿ ಫೆಬ್ರವರಿ 22ರಂದು ನಡೆದ ಪೋಷಕರ ಮಹಾಸಭೆಯಲ್ಲಿ ಪೋಷಕರನ್ನು ಉದ್ದೇಶಿಸಿ ಮಾತನಾಡಿದ ಖ್ಯಾತ ಪ್ರೇರಕ ಭಾಷಣಕಾರ ಮತ್ತು ಪೋಷಕರ ತಜ್ಞ ಶ್ರೀಯುತ ರಫೀಕ್ ಮಾಸ್ಟರ್ ” ನಮ್ಮ ಹೂಡಿಕೆಯನ್ನು ತಮ್ಮ ಮಕ್ಕಳ ಶಿಕ್ಷಣದ ಮೇಲೆ ಮಾಡಬೇಕು.

ಇದನ್ನೂ ಓದಿ: ಬಂಟ್ವಾಳ: ತಂಪು ಪಾನೀಯ ಸಾಗಾಟದ ಲಾರಿ ಪಲ್ಟಿ
ಆಗ ಮಕ್ಕಳು ಭವಿಷ್ಯದಲ್ಲಿ ನಮ್ಮ ಆಸ್ತಿಯಾಗುತ್ತಾರೆ ಹಾಗೂ ಪೋಷಕರು ಮಕ್ಕಳಲ್ಲಿ ಇರುವ ಧನಾತ್ಮಕ ಚಿಂತನೆಗಳನ್ನು, ಚಟುವಟಿಕೆಗಳನ್ನು ಹುರಿದುಂಬಿಸಬೇಕು” ಎಂದರು. ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಆಡಳಿತ ಟ್ರಸ್ಟಿನ ಸಂಚಾಲಕರಾದ ಶ್ರೀಯುತ ಜನಾಬ್ ಸಯ್ಯದ್ ಹಬೀಬ್ ಸಾಹೇಬ್, ಕಾರ್ಯದರ್ಶಿಯಾದ ಶ್ರೀಯುತ ಸಯ್ಯದ್ ಮಹಮ್ಮದ್ ಅಯ್ಯುಬ್,

ಕೋಶಾಧಿಕಾರಿಯಾದ ಶ್ರೀಯುತ ಸಯ್ಯದ್ ಮಹಮ್ಮದ್ ಇರ್ಫಾನ್, ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಜಾಕಿನ್ ಬಿನ್ ಹಾಗೂ ಅರಬಿಕ್ ಶಿಕ್ಷಣ ವಿಭಾಗದ ಮುಖ್ಯೋಪಾಧ್ಯಾಯರಾದ ಶ್ರೀಯುತ ಅಬ್ದುರ್ರಝಾಕ್ ಇಂದಾದಿ ಉಪಸ್ಥಿತರಿದ್ದರು.

ತಮ್ಮ ಪ್ರಾಸ್ತಾವಿಕ ಮಾತುಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಜಾಕಿನ್ ಬಿನ್ ಇವರು ” ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರ ಪಾತ್ರ ತುಂಬಾ ಮಹತ್ವದ್ದು.

ಪೋಷಕರು ಶಿಕ್ಷಕರೊಂದಿಗೆ ಕೈಜೋಡಿಸಿದರೆ ಮಕ್ಕಳು ಕಲಿಕೆಯಲ್ಲಿ ಇನ್ನಷ್ಟು ಮುಂದುವರಿಯಲು ಸಾಧ್ಯ”ಎಂದರು. ಕಾರ್ಯದರ್ಶಿಯಾದ ಶ್ರೀಯುತ ಸಯ್ಯದ್ ಅಯ್ಯುಬ್ ಇವರು ಶಾಲೆಯಲ್ಲಿನ ಶಿಕ್ಷಣದ ಪ್ರಗತಿಯನ್ನು ಉತ್ತೇಜಿಸುವಲ್ಲಿ ಪೋಷಕರ ಅಭಿಪ್ರಾಯಗಳು ಹಾಗೂ ಸಮಸ್ಯೆಗಳನ್ನು ಆಲಿಸಿದರು ಹಾಗೂ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವ ಭರವಸೆ ನೀಡಿದರು. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಸಭೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಕಾರಣಕರ್ತರಾದರು.

