ಉಜಿರೆ :(ಫೆ.24) ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆಯ ಅಂಗವಾಗಿ ದೀಪ ಪ್ರಧಾನ ಕಾರ್ಯಕ್ರಮವು ಫೆಬ್ರವರಿ. 22ರಂದು ಶಾಲಾ ಸಭಾಭವನದಲ್ಲಿ ನಡೆಯಿತು.

ಇದನ್ನೂ ಓದಿ: 🔴ಬಂದಾರು : ಜಿಲ್ಲಾ ಮಾಗಣೆ ಮಟ್ಟದ ಕುಂಬಾರರ ಬೃಹತ್ ಸಮಾವೇಶ ಕುಂಭಾ ಸಮಾಗಮ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಫಾ! ಅಬೆಲ್ ಲೋಬೊರವರು ವಹಿಸಿ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಜೀವನಕ್ಕೆ ಶುಭ ಹಾರೈಸಿದರು. ಪ್ರಾಂಶುಪಾಲರಾದ ಫಾ! ವಿಜಯ್ ಲೋಬೊ ರವರು ವಿದ್ಯಾರ್ಥಿಗಳು ಸಮಾಜದ ದೀಪಗಳಾಗಿ ಬೆಳಗುವಂತೆ ಕರೆಯಿತ್ತರು.


ವಿದ್ಯಾರ್ಥಿಗಳು ಜಗತ್ತಿನ ಬೆಳಕಾಗುವಂತೆ ದೀಪ ಪ್ರಧಾನ ಮಾಡಲಾಯಿತು. 9ನೇ ತರಗತಿಯ ವಿದ್ಯಾರ್ಥಿ ಫಾತಿಮತ್ ಶಿಯಾ ಎಲ್ಲಾ ಕಿರಿಯ ವಿದ್ಯಾರ್ಥಿಗಳ ಪರವಾಗಿ ಶುಭ ಹಾರೈಸಿದರು.

ಕಿರಿಯ ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಮನೋರಂಜನಾ ಕ್ರೀಡೆಗಳನ್ನು ನಡೆಸಿಕೊಟ್ಟರು. ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂಸ್ಥೆಗೆ 10ನೇ ತರಗತಿಯ ವಿದ್ಯಾರ್ಥಿಗಳು ಜೆರಾಕ್ಸ್ ಯಂತ್ರವನ್ನು ಕಾಣಿಕೆಯಾಗಿ ನೀಡಿದರು.

ಕುಮಾರಿ ಶ್ರಾವನ್ಯ ಮತ್ತು ಜೆವಿಟಾ ನಿರೂಪಿಸಿದ ಕಾರ್ಯಕ್ರಮದಲ್ಲಿ, ರೋಸಾ ಜೋಯ್ ಸ್ವಾಗತಿಸಿ, ಇಶ್ಮಾ ಫಾತಿಮಾ ವಂದಿಸಿದರು. ಇದೇ ಸಂದರ್ಭದಲ್ಲಿ ನಮ್ಮ ಶಾಲೆಯ “ಅನುದೀಪ 2024-25” ರ ವಾರ್ಷಿಕ ಸಂಚಿಕೆಯನ್ನು ಅನಾವರಣಗೊಳಿಸಲಾಯಿತು.
