ಉಜಿರೆ:(ಫೆ.25) ಧರ್ಮಸ್ಥಳದ ಡಾ. ಡಿ . ವೀರೇಂದ್ರ ಹೆಗ್ಗಡೆಯವರಿಗೆ ಕೆಪಿಜೆಪಿ ಪಕ್ಷದ ಸಂಸ್ಥಾಪಕರಾದ ಡಾ. ಡಿ. ಮಹೇಶ್ ಗೌಡ ಗಂಗಾ ನದಿಯ ಪವಿತ್ರ ಜಲವನ್ನು ಹಸ್ತಾಂತರಿಸಿದರು.


ಇದನ್ನೂ ಓದಿ: ಬೆಳ್ತಂಗಡಿ: ಮುಳಿಯ ಜ್ಯುವೆಲ್ಸ್ ನಲ್ಲಿ “ಕಾರು ಡ್ರಾ” ಕಾರ್ಯಕ್ರಮ
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹೇಶ್ ಗೌಡ , ಕಳೆದ ಒಂದು ವಾರ ಕುಂಭಮೇಳದಲ್ಲಿ ಭಾಗಿಯಾಗಿ , ಕಾಶಿಗೆ ಹೋಗಿ , ಅಯೋಧ್ಯೆಗೆ ಭೇಟಿ ಕೊಟ್ಟು , ಅಲ್ಲಿಂದ ಬರುವಾಗ ಗಂಗಾ ಜಲ ವನ್ನು ತೆಗೆದುಕೊಂಡು ಬಂದಿದ್ದೇನೆ . ಅಲ್ಲಿನ ಸಂತರೊಬ್ಬರು ಈ ಗಂಗಾ ಜಲವನ್ನು ನನಗೆ ನೀಡಿದರು ಎಂದರು.
ಇದನ್ನು ಇಂದು ಪೂಜ್ಯ ಖಾವಂದರಿಗೆ ಗಂಗಾ ಜಲವನ್ನು ಹಸ್ತಾಂತರಿಸಿದ್ದೇನೆ. ಇನ್ನು ಈ ಗಂಗಾ ಜಲವನ್ನು ಸುಬ್ರಮಣ್ಯ ದೇವಸ್ಥಾನಕ್ಕೂ ನೀಡುತ್ತೇನೆ ಎಂದರು. ನಾನು ಮೂಲತಃ ಪುತ್ತೂರಿನವನು, ಈಗ ಬೆಂಗಳೂರಿನಲ್ಲಿ ನೆಲೆಯಾಗಿದ್ದೇನೆ. ನನ್ನ ಪತ್ನಿ 3 ವರ್ಷಗಳಿಂದ ಪಾದಯಾತ್ರೆ ಮಾಡುತ್ತಿದ್ದಾರೆ.


ಈ ಬಾರಿ ನಾನು ಕೂಡ ಹಾಸನದಿಂದ ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ಬಂದೆ. ಇದು ಅತ್ಯಂತ ಆನಂದ ಉಂಟು ಮಾಡಿದೆ ಎಂದರು. 2015ರಲ್ಲಿ ಪಕ್ಷವನ್ನು ಸ್ಥಾಪನೆ ಮಾಡಿ ಜಿಲ್ಲೆಗಳಲ್ಲಿ ಓಡಾಡಿ ಪಕ್ಷವನ್ನು ಕಟ್ಟಿದ್ದೇವೆ ಇದರಿಂದ ತುಂಬಾ ಖುಷಿ ಮತ್ತು ಸಂತೃಪ್ತಿ ಇದೆ . ಇನ್ನು ಇದನ್ನು ಕರಾವಳಿ ಭಾಗದಲ್ಲಿ ವಿಸ್ತರಿಸುವ ಯೋಜನೆ ಇದೆ .

ದಕ್ಷಿಣ ಕನ್ನಡದ ಜನ ಮೃದು ಸ್ವಭಾವದವರಾಗಿದ್ದಾರೆ. ಹೀಗಾಗಿ ಈ ಭಾಗದಲ್ಲಿ ಪಕ್ಷ ಸಂಘಟನೆ ಮಾಡಿ ಪಂಚಾಯತ್ ಸೇರಿ ಎಲ್ಲ ವಿಭಾಗದಲ್ಲೂ ಚುನಾವಣೆಗೆ ಸ್ಪರ್ಧೆ ಮಾಡುತ್ತೇವೆ ಎಂದರು. ಯಾರಿಂದಲೂ ಪಕ್ಷಕ್ಕೆ ದುಡ್ಡು ಕೇಳೋದಿಲ್ಲ, ಬಿ ಫಾರ್ಮ್ ಗೂ ದುಡ್ಡು ಕೇಳೋದಿಲ್ಲ. ಸಮಾಜ ಸೇವೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ನಾವು ಪಕ್ಷ ಕಟ್ಟಿದ್ದೇವೆ ಎಂದರು.
ಒಳ್ಳೆಯವರಿಗೆ, ಸಮಾಜ ಸೇವೆ ಮನಸ್ಸು ಉಳ್ಳವರಿಗೆ ನಾವು ನಮ್ಮ ಪಕ್ಷದಲ್ಲಿ ಅಭ್ಯರ್ಥಿಯಾಗುವ ಅವಕಾಶ ಮಾಡಿಕೊಡುತ್ತೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ವಕೀಲರಾದ ಸುಮಾ , ಸವಿತಾ ಮಹೇಶ್ , ಪುಟ್ಟಲಕ್ಷ್ಮಿ, ಜಯಚಂದ್ರ ಉಪಸ್ಥಿತರಿದ್ದರು.
