ಬೆಳ್ತಂಗಡಿ:(ಫೆ.25) ಕುಕ್ಕಾವು ಸೇತುವೆಯ ಬಳಿ ಶಿವನದಿಯ ಕಿನಾರೆಯಲ್ಲಿ ಪಶ್ಚಿಮ ಘಟ್ಟಗಳಿಂದ ಆವೃತವಾದ ಸುಂದರ ಪರಿಸರದಲ್ಲಿ, ಶ್ರೀ ಬಾಲಕೃಷ್ಣ ಲಾವದಡಿ ಇವರ ಖಾಸಗಿ ಜಮೀನಿನಲ್ಲಿ ಅವರ ಒಪ್ಪಿಗೆಯಂತೆ ಉಜಿರೆಯ ಉದ್ಯಮಿ ಬದುಕು ಕಟ್ಟೋಣ ಬನ್ನಿ ಸಂಸ್ಥೆಯ ಸಂಚಾಲಕರು ಮೋಹನ್ ಕುಮಾರ್ ರವರು ಸೇವಾರೂಪದಲ್ಲಿ ನಿರ್ಮಿಸಿ ನೀಡಿರುವ ಧ್ಯಾನಾಸಕ್ತ ಸದಾಶಿವನ 12 ಅಡಿ ಎತ್ತರದ ಪ್ರತಿಮೆಯನ್ನು ಶಿವರಾತ್ರಿಯ ಪರ್ವ ಕಾಲದಲ್ಲಿ ಮೋಹನ್ ಕುಮಾರ್ ರವರು ಶಿವನ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಬದುಕು ಕಟ್ಟೋಣ ಬನ್ನಿ ಸಂಚಾಲಕ ಮೋಹನ್ ಕುಮಾರ್ ಲೋಕಾರ್ಪಣೆ ಮಾಡಿದರು. ಮೋಹನ್ ಕುಮಾರ್ ಅವರಿಗೆ ಬದುಕು ಕಟ್ಟೋಣ ಬನ್ನಿ ತಂಡದ ಅಧ್ಯಕ್ಷರಾದ ಬಿ.ಕೆ. ಧನಂಜಯ ರಾವ್ ರವರು ಸಾಥ್ ನೀಡಿದರು.


ಇದನ್ನೂ ಓದಿ: ಸುಳ್ಯ: 17 ವರ್ಷಗಳ ಹಿಂದೆ ಸುಳ್ಯವನ್ನೇ ಬೆಚ್ಚಿಬೀಳಿಸಿದ ಮೀರಾ ಬಾಲಕೃಷ್ಣ ಕೊಲೆ ಪ್ರಕರಣ


ಮುಂದಿನ ದಿನಗಳಲ್ಲಿ “ಶಿವ”ನ ಹೆಸರೇ ಈ ಭಾಗಕ್ಕೆ ಬರಬೇಕು: ಮೋಹನ್ ಕುಮಾರ್
ಈ ಸಂದರ್ಭದಲ್ಲಿ ಮಾತನಾಡಿದ ಬದುಕು ಕಟ್ಟೋಣ ಬನ್ನಿ ಸಂಚಾಲಕರು, ಉಜಿರೆ ಲಕ್ಷ್ಮಿ ಇಂಡಸ್ಟ್ರೀಸ್ ನ ಮಾಲಕರಾದ ಮೋಹನ್ ಕುಮಾರ್ ರವರು, ಧಾರ್ಮಿಕತೆ ಉಳಿಯಬೇಕು , ಧರ್ಮ ಉಳಿಯಬೇಕು ಎಂಬ ಹೋರಾಟದಲ್ಲಿ ನಾವು ತೊಡಗಿಸಿಕೊಂಡಿದ್ದೇವೆ. ಇಂತಹ ಕಾರ್ಯಕ್ರಮಗಳ ಮುಖಾಂತರ ಈ ಭಾಗದಲ್ಲಿ ಶಿವನ ಮೂರ್ತಿಯನ್ನು ಸ್ಥಾಪಿಸಿದ್ದೇವೆ. ಮುಂದಿನ ದಿನಗಳಲ್ಲಿ ಶಿವನ ಹೆಸರೇ ಈ ಭಾಗಕ್ಕೆ ಬರಬೇಕೆಂದು ಅಪೇಕ್ಷೆ ಪಡುತ್ತೇನೆ ಎಂದು ಹೇಳಿದರು.

ಬಳಿಕ ಬದುಕು ಕಟ್ಟೋಣ ಬನ್ನಿ ತಂಡದ ಅಧ್ಯಕ್ಷರಾದ ಬಿ.ಕೆ. ಧನಂಜಯ ರಾವ್ ಮಾತನಾಡಿ , ಪ್ರಕೃತಿ ರಮಣೀಯವಾದ ಪ್ರದೇಶದಲ್ಲಿ ಸನಾತನ ಧರ್ಮದ ಜಾಗೃತಿಗಾಗಿ , ಸನಾತನ ಧರ್ಮದ ಉಳಿವಿಗಾಗಿ ಶಿವಸಾನಿಧ್ಯವನ್ನು ಪ್ರತಿನಿಧಿಸುವಂತಹ ದೃಷ್ಟಿಯಿಂದ ಶಿವರಾತ್ರಿಯ ಪರ್ವಕಾಲದಲ್ಲಿ ಬದುಕು ಕಟ್ಟೋಣ ಸಂಸ್ಥೆಯ ಮೂಲಕ ಎಲ್ಲರ ಬದುಕನ್ನು ಕಟ್ಟಿದ ಉಜಿರೆ ಬದುಕು ಕಟ್ಟೋಣ ಬನ್ನಿ ಸಂಚಾಲಕರು, ಉಜಿರೆ ಲಕ್ಷ್ಮಿ ಇಂಡಸ್ಟ್ರೀಸ್ ನ ಮಾಲಕರಾದ ಮೋಹನ್ ಕುಮಾರ್ ಅವರು ಈ ದಿನ ಈ ದೇವಸ್ಥಾನದ ಹತ್ತಿರ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ , ಅದನ್ನು ಇಂದು ಲೋಕಾರ್ಪಣೆ ಮಾಡಿದ್ದೇವೆ ಎಂದು ಹೇಳಿದರು.
