ಮಂಗಳೂರು:(ಫೆ.26) ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಕಿಂಗ್ ಪಿನ್ ಗಳಿಬ್ಬರನ್ನು ಫೆಬ್ರವರಿ 25 ರಂದು ಪೋಲಿಸರು ಅರೆಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಉಪ್ಪಿನಂಗಡಿ: ರಸ್ತೆ ದಾಟುತ್ತಿದ್ದ ಮಹಿಳೆಗೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಸಾವು
ಭಾಸ್ಕರ್ ಬೆಳ್ಳಪಾಡ @ ಶಶಿ ಥೇವರ್, ಸ್ಥಳೀಯ ನಿವಾಸಿ ಮಹಮ್ಮದ್ ನಝೀರ್ ಆರೋಪಿಗಳು. ಬೆಂಗಳೂರು ರೈಲ್ವೇ ನಿಲ್ದಾಣದ ಬಳಿ ಭಾಸ್ಕರ್ ಬೆಳ್ಳಪಾಡನನ್ನು ಬಂಧಿಸಲಾಗಿದೆ.



ಇವರು ಕೆ.ಸಿ.ರೋಡ್ ನಿವಾಸಿ ಮಹಮ್ಮದ್ ನಝೀರ್ ನನ್ನು ಸಂಪರ್ಕ ಮಾಡಿ 6 ತಿಂಗಳ ಹಿಂದೆ ಸಂಚು ಮಾಡಿದ್ದರು. ಇಬ್ಬರು ಆರೋಪಿಗಳು, ದರೋಡೆ ನಡೆಸಲು ದಿನಾಂಕ ಹಾಗೂ ಸಮಯ ನಿಗದಿ ಮಾಡಿದ್ದರು ಎಂದು ತಿಳಿದು ಬಂದಿದೆ.

