ತಣ್ಣೀರುಪಂತ:(ಫೆ.27) ತಣ್ಣೀರುಪಂತ ಗ್ರಾಮದ ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ಶಿವರಾತ್ರಿಯ ಪ್ರಯುಕ್ತ ಶ್ರೀ ಮಹಿಷಮರ್ದಿನಿ ಕಲಾ ಪ್ರತಿಷ್ಠಾನ ಚಾರ -ಹೆಬ್ರಿ ಸಂಯೋಜನೆಯಲ್ಲಿ ಇಂದ್ರಕೀಲಕ -ಊರ್ವಶಿ ಶಾಪ ತಾಳಮದ್ದಳೆ ಜರಗಿತು.

ಇದನ್ನೂ ಓದಿ: ಬಂಟ್ವಾಳ: ಲಕ್ಷಾಂತರ ರೂ. ಖೋಟಾ ನೋಟು ಚಲಾವಣೆ
ಭಾಗವತರಾಗಿ ಕುಮಾರಿ ಸ್ನೇಹ ಆಚಾರ್ಯ ಕಾರ್ಕಳ, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ ಆಳ್ವ ಬಾರ್ಯ ಅರ್ಥದಾರಿಗಳಾಗಿ ಜಬ್ಬಾರ್ ಸಮೋ (ಈಶ್ವರ )ನಾ. ಕಾರಂತ ಪೆರಾಜೆ(ಊರ್ವಶಿ )ದಿವಾಕರ ಆಚಾರ್ಯ ಗೇರುಕಟ್ಟೆ (ದೇವೇಂದ್ರ )ವಿದ್ವಾನ್ ಕೇಕಣಾಜೆ ಕೇಶವ ಭಟ್(ಅರ್ಜುನ )ಚಾರ ಪ್ರದೀಪ ಹೆಬ್ಬಾರ್ (ರ್ಪಾರ್ವತಿ ಮತ್ತು ಚಿತ್ರಸೇನ )ಭಾಗವಹಿಸಿದ್ದರು.



ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಭರತ್ ಶೆಟ್ಟಿ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದರು. ದೇವಳದ ಸಮಿತಿಯ ಸದಸ್ಯರು ಕಲಾವಿದರನ್ನು ಗೌರವಿಸಿದರು. ಪ್ರದೀಪ್ ಹೆಬ್ಬಾರ್ ಸ್ವಾಗತಿಸಿ, ಪ್ರಭಾಕರ ಗೌಡ ಪೊಸಂದಡಿ ವಂದಿಸಿದರು.

