ಧರ್ಮಸ್ಥಳ:(ಫೆ.27) ಧರ್ಮಸ್ಥಳದಲ್ಲಿ ನೂತನ ಬೃಹತ್ ಘಂಟೆಯ ಉದ್ಘಾಟನೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ನೆರವೇರಿಸಿ, ಶ್ರೀ ಕ್ಷೇತ್ರಕ್ಕೆ ಘಂಟೆಯನ್ನು ಅರ್ಪಿಸಿದ ಬೆಂಗಳೂರಿನ ಉದ್ಯಮಿ ದಿನೇಶ್ ರವರನ್ನು ಸನ್ಮಾನಿಸಿದರು.


ಇದನ್ನೂ ಓದಿ: ಸುಳ್ಯ : ನೇಣು ಬಿಗಿದುಕೊಂಡು ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ!!
ಬೆಂಗಳೂರಿನ ಉದ್ಯಮಿಯಾದ ಕೆ.ಎಸ್. ದಿನೇಶ್ ಮತ್ತು ಪತ್ನಿ ಪಿ. ಸುನೀತಾ ಧರ್ಮಸ್ಥಳದ ಭಕ್ತರಾಗಿದ್ದು, ದೇವಸ್ಥಾನಕ್ಕೆ ಕಾಣಿಕೆಯಾಗಿ ಅರ್ಪಿಸಿದ ಬೃಹತ್ ಘಂಟೆಯನ್ನು

ಬುಧವಾರ ಶಿವರಾತ್ರಿಯ ಶುಭಾವಸರದಲ್ಲಿ ಧರ್ಮಸ್ಥಳದ ಅಣ್ಣಪ್ಪಸ್ವಾಮಿ ಬೆಟ್ಟದ ಎದುರು ನಿರ್ಮಿಸಿದ ನೂತನ ಮಂಟಪದಲ್ಲಿ ಧರ್ಮಾಧಿಕಾರಿಗಳಾದ ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು.


