ಪುತ್ತೂರು:(ಫೆ.27) ಪುತ್ತೂರು ಸಂತೆಯಲ್ಲಿ ತಂದೆಯ ಜೊತೆ ತರಕಾರಿ ವ್ಯಾಪಾರ ನಡೆಸುತ್ತಿದ್ದ ಬನ್ನೂರು ಚೆಲುವಮ್ಮನಕಟ್ಟೆ ನಿವಾಸಿ ಯುವಕನೋರ್ವ ನಾಪತ್ತೆಯಾದ ಬಗ್ಗೆ ಆತನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

ಬನ್ನೂರು ಚೆಲುವಮ್ಮನಕಟ್ಟೆ ನಿವಾಸಿ ಮೊಹಮ್ಮದ್ ಎಂಬವರ ಪುತ್ರ ಅಬೂಬಕ್ಕರ್ ಸಿದ್ದೀಕ್(21ವ)ರವರು ನಾಪತ್ತೆಯಾದವರು.


ನನ್ನ ಮಗ ಅಬೂಬಕ್ಕರ್ ಸಿದ್ಧಿಕ್ ನನ್ನೊಂದಿಗೆ ಮಾರ್ಕೆಟ್‍ನಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದು, ಫೆ. 24ರಂದು ಸೋಮವಾರದ ಸಂತೆಯಲ್ಲಿ ತರಕಾರಿ ವ್ಯಾಪಾರ ಮಾಡಿ

ಮಧ್ಯಾಹ್ನ ಗಂಟೆ 12ಕ್ಕೆ ತಲೆನೋವೆಂದು ಮನೆಗೆ ಹೋದವನು ಅಲ್ಲಿ ತನ್ನ ಮೊಬೈಲ್ ಇಟ್ಟು ನಾಪತ್ತೆಯಾಗಿದ್ದಾನೆ ಎಂದು ಅವರ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಪುತ್ತೂರು ನಗರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

