Fri. Feb 28th, 2025

Dharmasthala: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಾ.16 ರಿಂದ ಮಾ.18 ರವರೆಗೆ ಬ್ರಹ್ಮಕಲಶ ಮತ್ತು ಮಾ.22 ರಿಂದ ಮಾ.26 ರವರೆಗೆ ಮಾಯಿನಡಾವಳಿ ಕಾರ್ಯಕ್ರಮ

ಧರ್ಮಸ್ಥಳ: (ಫೆ.28) ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಮಾರ್ಚ್.16 ರಿಂದ ಮಾರ್ಚ್.18 ರವರೆಗೆ ಬ್ರಹ್ಮ ಕಲಶ ನಡೆಯಲಿದೆ.

ಇದನ್ನೂ ಓದಿ: Dharmasthala: ಧರ್ಮಸ್ಥಳ ಮಂಜುನಾಥ ಸ್ವಾಮಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಪಾರ ಮೇಳ

ಮಾರ್ಚ್.16 ರಂದು ಸಂಜೆ 5 ಗಂಟೆಯಿಂದ 8 ಗಂಟೆಯವರೆಗೆ ಮಾತ್ರ ದೇವಸ್ಥಾನದ ಒಳಾಂಗಣಕ್ಕೆ ಭಕ್ತರನ್ನು ಬಿಡಲಾಗುತ್ತದೆ. ರಾತ್ರಿ 8 ಗಂಟೆಯಿಂದ ಹೊರಾಂಗಣದಿಂದ ದೇವರ ದರ್ಶನಕ್ಕೆ ಅವಕಾಶವಿದೆ, ಹಾಗೆಯೇ ಮಾರ್ಚ್.17 ರಂದು ಕೂಡ ಭಕ್ತರು ಈ ನಿಯಮ ವನ್ನು ಅನುಸರಿಸಬೇಕಾಗುತ್ತದೆ.

ಮಾರ್ಚ್.18 ರಂದು ಬೆಳಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ ಗರ್ಭಗುಡಿಯ ಆವರಣಕ್ಕೆ ಭಕ್ತರನ್ನು ಬಿಡಲಾಗುತ್ತದೆ. 9 ಗಂಟೆಯ ನಂತರ 12: 30 ರವರೆಗೆ ಹೊರಾಂಗಣದಿಂದ ದೇವರ ದರ್ಶನಕ್ಕೆ ಅವಕಾಶವಿದೆ ಇದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಪಾರುಪತ್ಯಗಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಾಗೆಯೇ ವರ್ಷಂಪ್ರತಿ ಅಣ್ಣಪ್ಪ ಬೆಟ್ಟದಲ್ಲಿ ನಡೆಯುವ ಮಾಯಿ ನಡಾವಳಿ ಕಾರ್ಯಕ್ರಮದ ಬಗ್ಗೆಯೂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರ್ಚ್.22 ರಂದು ಗೊನೆ ಕಡಿಯುವುದು, ಮಾರ್ಚ್.23 ರಂದು ಕುದಿ ಹಾಕುವುದು, ಮಾರ್ಚ್.24 ರಂದು ಧರ್ಮ ದೈವ ಗಳ ಭಂಡಾರ ಹೊರಡುವುದು, ಮಾರ್ಚ್.25 ರಂದು ಧರ್ಮ ನೇಮ, ಮಾರ್ಚ್ .26 ರಂದು, ಅಣ್ಣಪ್ಪ ನೇಮ ನಡೆಯಲಿದೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು