ಕೇರಳ:(ಫೆ.28) ಚಲಿಸುತ್ತಿದ್ದ ರೈಲಿನಿಂದ ಹಾರಿ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಟ್ಟಾಯಂನ ಎಟ್ಟುಮನೂರಿನಲ್ಲಿ ರೈಲು ಹಳಿಯ ಬಳಿ ನಡೆದಿದೆ.

ಶೈನಿ ಕುರಿಯಾಕೋಸ್ (42) ಮತ್ತು ಅವರ ಪುತ್ರಿಯರಾದ ಇವಾನಾ ಮರಿಯಾ ನೋಬಿ (10) ಮತ್ತು ಅಲೀನಾ ಎಲಿಸಬಾತ್ ನೋಬಿ (11) ಮೃತರು. ಶುಕ್ರವಾರ ಬೆಳಿಗ್ಗೆ 5.15 ರ ಸುಮಾರಿಗೆ ಮೂವರು ಕೊಟ್ಟಾಯಂ ನಿಲಂಬೂರು ರೈಲಿನ ಮುಂದೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.




ಕೌಟುಂಬಿಕ ಸಮಸ್ಯೆಯಿಂದಾಗಿ ತನ್ನ ಪತಿಯಿಂದ ಬೇರ್ಪಟ್ಟು ತನ್ನ ತಂದೆಯ ಜೊತೆ ಪರೋಲಿಕಲ್ ಎಂಬಲ್ಲಿ ಮಹಿಳೆ ವಾಸವಿದ್ದರು ಎಂದು ಹೇಳಲಾಗಿದೆ. ಮಹಿಳೆಯ ಪತಿ ವಿದೇಶದಲ್ಲಿದ್ದು, ಒಬ್ಬ ಮಗ ತಿರುವನಂತಪುರಂ ನಲ್ಲಿ ಓದುತ್ತಿದ್ದಾನೆ ಎನ್ನಲಾಗಿದೆ.
