ಮಂಗಳೂರು:(ಫೆ.28) ಕರ್ನಾಟಕ ಮೂಲದ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಫೆಬ್ರವರಿ 28 ರಂದು ಕಟೀಲು ದುರ್ಗಾಪರಮೇಶ್ವರಿ ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದಿದ್ದಾರೆ.

ಇದನ್ನೂ ಓದಿ: ಉಡುಪಿ: ಉದ್ಯಾವರ ಕೆನರಾ ಬ್ಯಾಂಕ್ ಎಟಿಎಂನಿಂದ ಹಣ ಕಳವಿಗೆ ವಿಫಲ ಯತ್ನ
ಶಿಲ್ಪಾ ಶೆಟ್ಟಿ ಅವರು ಮಂಗಳೂರು ಹಿನ್ನೆಲೆ ಹೊಂದಿದವರು. ಅವರಿಗೆ ತುಳು ಭಾಷೆ ಪರ್ಫೆಕ್ಟ್ ಆಗಿ ಮಾತನಾಡಲು ಬರುತ್ತದೆ. ಅವರಿಗೆ ದೇವರ ಮೇಲೆ ಅಪಾರ ಭಕ್ತಿ. ಸಮಯ ಸಿಕ್ಕಾಗ ದಕ್ಷಿಣ ಕನ್ನಡಕ್ಕೆ ಆಗಮಿಸಿ ಅವರು ದೇವರ ದರ್ಶನ ಪಡೆಯುತ್ತಾರೆ.



ಈಗ ಮಂಗಳೂರು ಸಮೀಪದ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಶಿಲ್ಪಾ ಶೆಟ್ಟಿ ಜೊತೆ ಅವರ ತಂಗಿ ಶರ್ಮಿತಾ ಶೆಟ್ಟಿ ಕೂಡ ಇದ್ದರು. ಈ ವೇಳೆ, ದೇವರ ಮೇಲೆ ಇರುವ ಹೂವನ್ನು ಕೊಡಿ ಎಂದು ತುಳುವಿನಲ್ಲಿ ಶಿಲ್ಪಾ ಕೇಳಿದ್ದಾರೆ.

