ಉಡುಪಿ:(ಫೆ.28) ಉಡುಪಿ ಸಮೀಪದ ಉದ್ಯಾವರದ ಕೆನರಾ ಬ್ಯಾಂಕಿನ ಎಟಿಎಂನಿಂದ ಹಣ ಕಳವು ಮಾಡಲು ವಿಫಲ ಯತ್ನ ನಡೆಸಿದ್ದ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: 👩🏻🔬ಉಜಿರೆ: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ “ವಿಜ್ಞಾನ ದಿನಾಚರಣೆ”
ಮಂಜನಾಡಿಯ ಅಬೂಬಕ್ಕರ್ ಸಿದ್ದಿಕ್ (24) ಮತ್ತು ಪಡೀಲ್ ನ ಮೊಹಮ್ಮದ್ ಯಾಸೀನ್(21) ಬಂಧಿತ ಆರೋಪಿಗಳು.

ಆರೋಪಿಗಳಿಬ್ಬರು ಫೆಬ್ರವರಿ 12ರಂದು ಉದ್ಯಾವರದಲ್ಲಿ ಕೆನರಾ ಬ್ಯಾಂಕಿನ ಎಟಿಎಂನ ಹಣ ದೋಚಲು ವಿಫಲ ಯತ್ನ ನಡೆಸಿದ್ದರು.


ಆರೋಪಿಗಳ ಚಲನವಲನದ ಸಿಸಿಟಿವಿಯ ದೃಶ್ಯ ಆಧರಿಸಿ ಕಾಪು ಪೊಲೀಸರು ಇಬ್ಬರನ್ನು ಮಂಗಳೂರಿನ ಬಂದರಿನಲ್ಲಿ ಬಂಧಿಸಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಸ್ಕೂಟಿ ಸಹಿತ ಇತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

