ಉಜಿರೆ:(ಫೆ.28) “ವಿದ್ಯಾರ್ಥಿಗಳಲ್ಲಿ ಬರೀ ಜ್ಞಾನ ಸಾಲದು, ಜ್ಞಾನದ ಜೊತೆ ಕೌಶಲ್ಯಗಳ ಅಗತ್ಯತೆ ಇದೆ” ಎಂದು ರಾಮನ್ ಪರಿಣಾಮವನ್ನು ಪ್ರಾತ್ಯಕ್ಷಿಕೆಯ ಮೂಲಕ ಎಸ್.ಡಿ.ಎಮ್ ಸ್ನಾತಕೋತ್ತರ ಕಾಲೇಜಿನ ಉಪನ್ಯಾಸಕಿ ಡಾ. ನೆಫಿಸತ್.ಪಿ ವಿದ್ಯಾರ್ಥಿಗಳೊಂದಿಗೆ ವಿಷಯ ವಿವರಿಸಿದರು.

ಇದನ್ನೂ ಓದಿ: ಹಾಸನ: ಮಾ. 15ರಿಂದ ಶಿರಾಡಿ ಘಾಟಿ ಬಂದ್?
ಇವರು ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಸಿ.ವಿ ರಾಮನ್ ಅವರ ಸಂಶೋಧನೆಯಾದ ‘ರಾಮನ್ ಪರಿಣಾಮ’ಕ್ಕೆ ನೋಬೆಲ್ ಪ್ರಶಸ್ತಿ ದೊರೆತ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಿದ ವಿಜ್ಞಾನ ದಿನದ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.



ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಪೋಸ್ಟರ್ ಮೇಕಿಂಗ್, ವಿಜ್ಞಾನ ಮಾದರಿ ತಯಾರಿ, ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಶಿಕ್ಷಕಿ ಶಾಂಟಿ ಜಾರ್ಜ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಶಶಿಧರ್ ವಂದಿಸಿ, ನಿನಾದ್ ನಿರೂಪಿಸಿದರು.
