ಬಂಟ್ವಾಳ: (ಮಾ.1) ದಿಗಂತ್ ಫೆ.25 ರಂದು ಸಂಜೆ ಸುಮಾರು 7 ರ ಸುಮಾರಿಗೆ ಫರಂಗಿಪೇಟೆ ಅಂಜನೇಯ ವ್ಯಾಯಾಮ ಶಾಲೆಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದ ವಿದ್ಯಾರ್ಥಿ , ದೇವಸ್ಥಾನಕ್ಕೂ ಹೋಗದೆ ನಾಪತ್ತೆಯಾಗಿದ್ದಾನೆ.

ಪೂಜೆ ಮುಗಿದು ಮನೆಗೆ ಬರಬೇಕಾಗಿದ್ದ ದಿಗಂತ್ ಮನೆಗೆ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡ ಮನೆಯವರು 9 ಗಂಟೆಯ ಬಳಿಕ ಊರವರ ಸಹಕಾರದಿಂದ ರಾತ್ರಿ ಮೂರು ಗಂಟೆವರೆಗೂ ಹುಡುಕಾಡಿದ್ದಾರೆ.

ಈ ಸಂದರ್ಭದಲ್ಲಿ ರೈಲ್ವೆ ಹಳಿಯಲ್ಲಿ ಈತನ ಚಪ್ಪಲಿ ಹಾಗೂ ಮೊಬೈಲ್ ದೊರಕಿತ್ತು. ಒಂದು ಚಪ್ಪಲಿಯಲ್ಲಿ ರಕ್ತದ ಕಲೆ ಕಂಡು ಬಂದಿದೆ. ಬೆಳಿಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಿದ್ದಾರೆ.

ಇದೀಗ ಮನೆಯಲ್ಲಿ ಚೀಟಿಯೊಂದು ದೊರೆತಿದೆ ಎಂದು ಮೂಲಗಳು ಹೇಳಿಕೊಂಡಿದ್ದು, ಚೀಟಿಯಲ್ಲಿ ಏನಿದೆ, ಯಾವ ಬಗ್ಗೆ ಬರೆದಿದ್ದಾನೆ ಎಂಬುದು ಪೊಲೀಸ್ ತನಿಖೆಗೆ ಸಹಾಯವಾಗಲಿದೆ.

ದಿಗಂತ್ ಮಂಗಳೂರು ಖಾಸಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಯಾಗಿದ್ದು, ಅಂತಿಮ ಪರೀಕ್ಷೆಗಾಗಿ ಪ್ರವೇಶಪತ್ರವನ್ನುನಾಪತ್ತೆಯಾದ ದಿನ ಕಾಲೇಜಿನಿಂದ ತಂದಿದ್ದ. ಅಲ್ಲದೆ ಈತನ ಸ್ನೇಹಿತನ ಬಳಿ 25 ರ ಬಳಿಕ ನಿನಗೆ ಉತ್ತರ ನೀಡುತ್ತೇನೆ ಎಂದು ಹೇಳಿಕೊಂಡಿದ್ದ ಎಂದಿದ್ದಾನೆಯಂತೆ? ಈ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ಇದ್ದು,ಈ ಬಗ್ಗೆ ತನಿಖೆ ಮುಂದುವರಿಸಿದೆ.

ದಿಗಂತ್ ನಾಪತ್ತೆಯಾಗಿ 5 ದಿನ ಕಳೆದರೂ ಕೂಡ ಆತನ ಸುಳಿವು ಇನ್ನೂ ಸಿಕ್ಕಿಲ್ಲ. ಮಗನ ನೆನೆದು ತಾಯಿ ಕಣ್ಣೀರಿಟ್ಟಿದ್ದಾರೆ. ನನ್ನ ಮಗ ತಪ್ಪು ಹಾದಿ ತುಳಿಯುವ ಹುಡುಗನಲ್ಲ, ಆತ ನಮ್ಮೊಂದಿಗೆ ತುಂಬಾ ಚೆನ್ನಾಗಿಯೇ ಇದ್ದ, ನನ್ನ ಮಗ ನನಗೆ ಬೇಕು ಸರ್ ಎಂದು ಗೋಗರೆದಿದ್ದಾರೆ.
