ಬಂಟ್ವಾಳ:(ಮಾ.1) ಫರಂಗಿಪೇಟೆ ಸಮೀಪದ ಕಿದೆಬೆಟ್ಟು ಪದ್ಮನಾಭ ಮಡಿವಾಳ ಅವರ ಮಗ ಪಿಯುಸಿ ವಿದ್ಯಾರ್ಥಿ ದಿಗಂತ್ ಅವರು ನಿಗೂಢ ನಾಪತ್ತೆಯಾಗಿ ಇಂದಿಗೆ 5 ದಿನಗಳು ಕಳೆದರೂ ಪೋಲಿಸ್ ಇಲಾಖೆ ಹಾಗೂ

ಇದನ್ನೂ ಓದಿ: ಮಂಗಳೂರು: ಫರಂಗಿಪೇಟೆಯ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ
ಸರಕಾರದ ಯಾವುದೇ ರೀತಿಯ ಕಾರ್ಯಾಚರಣೆ ಯಶಸ್ವಿ ಕಾಣದೆ ಇರುವುದರಿಂದ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಫರಂಗಿಪೇಟೆ ಜಂಕ್ಷನ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.



ಪ್ರತಿಭಟನೆಯಲ್ಲಿ ಸತೀಶ್ ಕುಂಪಲ, ಪ್ರಸಾದ್ ಕುಮಾರ್ ರೈ, ರವೀಂದ್ರ ಕಂಬಳಿ, ಭರತ್ ಕುಮ್ಡೆಲು, ಉಮೇಶ್ ಶೆಟ್ಟಿ ಬರ್ಕೆ, ತಾರಾನಾಥ ಕೊಟ್ಟಾರಿ

ಫಾರೂಕ್ ಫರಂಗಿಪೇಟೆ, ರಮ್ಲಾನ್, ನಂದನ್ ಮಲ್ಯ, ಮನೋಜ್ ಆಚಾರ್ಯ ಭಾಗಿಯಾಗಿದ್ದರು.
