Mon. Mar 10th, 2025

Mysore: ಕುಡಿದ ಅಮಲಿನಲ್ಲಿ ತನ್ನ ಮನೆಗೆ ತಾನೇ ಬೆಂಕಿಯಿಟ್ಟ ವ್ಯಕ್ತಿ – ಇಡೀ ಮನೆ ಅಗ್ನಿಗಾಹುತಿ

ಮೈಸೂರು (ಮಾ.1): ಕುಡಿದ ಅಮಲಿನಲ್ಲಿ ವ್ಯಕ್ತಿ ಓರ್ವ ತನ್ನ ಮನೆಗೆ ತಾನೇ ಬೆಂಕಿಯಿಟ್ಟುಕೊಂಡಿರುವಂತಹ ಘಟನೆ ಮೈಸೂರಿನ ಅಗ್ರಹಾರದ ಮಧುವನ ಬಡಾವಣೆಯಲ್ಲಿ ನಡೆದಿದೆ.

ಇದನ್ನೂ ಓದಿ: Shivamogga: ಸತ್ತು ಬದುಕಿ ವಿಸ್ಮಯ ಮೂಡಿಸಿದ್ದ ಮಹಿಳೆ ಸಾವು

ಅದೃಷ್ಟವಶಾತ್​ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡು ಇಡೀ ಮನೆ ಅಗ್ನಿಗಾಹುತಿಯಾಗಿದ್ದು, ಬಟ್ಟೆ, ದವಸ ಧಾನ್ಯ, ಗೃಹೋಪಯೋಗಿ ವಸ್ತುಗಳು ಸುಟ್ಟುಹೋಗಿವೆ.

ನಡೆದದ್ದೇನು?
ಕುಡಿತದ ದಾಸನಾಗಿದ್ದ ಗುರು, ಬೆಳಗ್ಗೆಯೇ ಕುಡಿದು ಬಂದು ಮತ್ತೆ ಕುಡಿಯಲು ಹಣ ಕೇಳಿದ್ದಾರೆ. ಈ ವಿಚಾರಕ್ಕೆ ಮನೆಯವರ ಜೊತೆ ಗಲಾಟೆ ಮಾಡಿಕೊಂಡು ಬೀಡಿ ಸೇದುತ್ತಿದ್ದರು.

ಕುಡಿದ ನಶೆಯಲ್ಲಿ ಗುರು ಬೀಡಿ ಸೇದಿ ಬೆಡ್ ಮೇಲಿಟ್ಟಿದ್ದಾರೆ. ಹೀಗಾಗಿ ಹಾಸಿಗೆಗೆ ಹೊತ್ತಿಕೊಂಡಿದ್ದ ಬೆಂಕಿ ಇಡೀ ಮನೆಗೆ ವ್ಯಾಪಿಸಿದೆ. ಮನೆಯವರು ಬೆಂಕಿ ನಂದಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ವಸ್ತುಗಳೆಲ್ಲಾ ಸುಟ್ಟುಹೋಗಿವೆ.

Leave a Reply

Your email address will not be published. Required fields are marked *