ಪುಣೆ (ಮಾ.1): ಅದು ಸಮ್ಮತಿಯ ಲೈಂಗಿಕ ಕ್ರಿಯೆಯಾಗಿತ್ತು, ಅತ್ಯಾಚಾರವಲ್ಲ ಎಂದು ಪುಣೆ ಅತ್ಯಾಚಾರ ಆರೋಪಿ ದತ್ತಾತ್ರೇಯ ಗಡೆ ನ್ಯಾಯಾಲಯದಲ್ಲಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಸುಮಾರು 72 ಗಂಟೆಗಳ ಕಾಲ ಹುಡುಕಾಟ ನಡೆಸಿದ ನಂತರ ಶುಕ್ರವಾರ ಬೆಳಗ್ಗೆ ಶಿರೂರು ತಹಸಿಲ್‌ನಿಂದ ಬಂಧಿಸಲ್ಪಟ್ಟ ಪುಣೆ ಅತ್ಯಾಚಾರ ಆರೋಪಿ ದತ್ತಾತ್ರೇಯ ರಾಮದಾಸ್ ಗಡೆಯನ್ನು ಪುಣೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಇದನ್ನೂ ಓದಿ: 🔴ಕಣಿಯೂರು: ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ರಕ್ಷಿತ್ ಪಣೆಕ್ಕರ
ಆರೋಪಿಯನ್ನು ಈಗ 12 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಪ್ರಕರಣದ ತನಿಖೆಗಾಗಿ ಪೊಲೀಸರು 14 ದಿನಗಳ ಕಸ್ಟಡಿಗೆ ಕೋರಿದ್ದರು. ಆದರೆ 12 ದಿನಗಳ ಕಸ್ಟಡಿಗೆ ನೀಡಲಾಯಿತು. ಆರೋಪಿ ಗಡೆ ಪರ ವಕೀಲರು, ಇದು ಪರಸ್ಪರ ಒಪ್ಪಿಗೆಯ ಲೈಂಗಿಕ ಕ್ರಿಯೆಯಾಗಿದ್ದು, ಮಹಿಳೆ ಹೇಳಿಕೊಂಡಿರುವಂತೆ ಯಾವುದೇ ಅತ್ಯಾಚಾರ ನಡೆದಿಲ್ಲ ಎಂದು ಪ್ರತಿಪಾದಿಸಿದರು.
ಆರೋಪಿಯ ವಿರುದ್ಧ 6 ಕ್ರಿಮಿನಲ್ ಪ್ರಕರಣಗಳಿವೆ ಸಿಸಿಟಿವಿ ದೃಶ್ಯಾವಳಿಯಲ್ಲಿ ಸಂತ್ರಸ್ತೆ ಸ್ವಯಂಪ್ರೇರಣೆಯಿಂದ ಅತ್ಯಾಚಾರ ಘಟನೆ ನಡೆದ ಬಸ್‌ಗೆ ಪ್ರವೇಶಿಸುತ್ತಿರುವುದನ್ನು ತೋರಿಸಲಾಗಿದೆ. ಆದರೆ, ಆರೋಪಿಯ ವಿರುದ್ಧ ಈ ಹಿಂದೆ ಆರು ಪ್ರಕರಣಗಳು ದಾಖಲಾಗಿದ್ದು, ಆತನ ವಿರುದ್ಧ ಕ್ರಿಮಿನಲ್ ಹಿನ್ನೆಲೆಗಳಿವೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ತಿಳಿಸಿದರು.




ಗಡೆ ವಿರುದ್ಧದ ಈ ಆರು ಪ್ರಕರಣಗಳಲ್ಲಿ ಐದು ಪ್ರಕರಣಗಳು ಮಹಿಳಾ ದೂರುದಾರರನ್ನು ಒಳಗೊಂಡಿವೆ ಎಂದು ಅವರು ಹೇಳಿದರು. ಆರೋಪಿ ದತ್ತಾತ್ರೇಯ ಗಡೆ ಅವರನ್ನು ಮಾರ್ಚ್ 12 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
