ಉಜಿರೆ (ಮಾ.1): ಉಜಿರೆಯ ಶ್ರೀ ಧ.ಮಂ. ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಹಿರಿಯ ಅಧ್ಯಾಪಕ ಡಾ.ವಿಶ್ವನಾಥ ಪಿ ನೇಮಕಗೊಂಡಿದ್ದಾರೆ. ಡಾ.ಕುಮಾರ ಹೆಗ್ಡೆ ಅವರ ವಯೋಸಹಜ ನಿವೃತ್ತಿಯಿಂದ ತೆರವಾಗಿದ್ದ ಪ್ರಾಂಶುಪಾಲರ ಹುದ್ದೆಗೆ ವಿಶ್ವನಾಥ ಅವರು ಆಯ್ಕೆಯಾಗಿದ್ದಾರೆ. 34 ವರ್ಷಗಳ ಬೋಧನಾನುಭವವುಳ್ಳ ವಿಶ್ವನಾಥ ಅವರು ಕಳೆದ ಐದು ವರ್ಷಗಳಿಂದ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: 🛑ಬಂಟ್ವಾಳ: ಪಿಯುಸಿ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ
ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದಲ್ಲಿ ಅಧ್ಯಯನ ಪೂರೈಸಿ 1990ರಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಆರ್ಗ್ಯಾನಿಕ್ ಕೆಮಿಸ್ಟ್ರಿ ವಿಷಯದಲ್ಲಿ ವಿಶೇಷ ಪರಿಣತಿ ಪಡೆದವರು. ನವದೆಹಲಿಯ ಯುಜಿಸಿಯ ಫ್ಯಾಕಲ್ಟಿ ಇಂಪ್ರೂವ್‌ಮೆಂಟ್ ಪ್ರೋಗ್ರಾಂನ ಭಾಗವಾಗಿ ಇವರು ಹೀಟರಾಸೈಕ್ಲಿಕ್ ಕೆಮಿಸ್ಟ್ರಿ ವಲಯದಲ್ಲಿ ನಡೆಸಿದ ಸಂಶೋಧನಾ ಅಧ್ಯಯನಕ್ಕಾಗಿ1999ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದಿದ್ದಾರೆ.

ಸ್ನಾತಕೋತ್ತರ ಅಧ್ಯಯನ ಪೂರ್ಣಗೊಳಿಸಿದ ನಂತರ ಸುಳ್ಯದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ರಸಾಯನಶಾಸ್ತ್ರ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿ ಒಂದು ವರ್ಷದವರೆಗೆ ಸೇವೆ ಸಲ್ಲಿಸಿದ ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಅಧ್ಯಾಪಕರಾಗಿ 1991ರಲ್ಲಿ ಸೇರ್ಪಡೆಗೊಂಡರು. ಕಾಲೇಜಿನಲ್ಲಿ 2008ರಲ್ಲಿ ಆರಂಭಗೊಂಡ ಸ್ನಾತಕೋತ್ತರ ರಸಾಯನಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಂಯೋಜಕ ಹುದ್ದೆಯ ಹೆಚ್ಚುವರಿ ಜವಾಬ್ದಾರಿ ಇವರ ಹೆಗಲೇರಿತು. ವಿಭಾಗದ ಮುಖ್ಯಸ್ಥರಾಗಿ 2003ರಲ್ಲಿ ಬಡ್ತಿ ಹೊಂದಿ ಏಳು ವರ್ಷಗಳ ಕಾಲ ಕಾರ್ಯನಿರ್ವಹಿಸಿದರು. ನಂತರ 2020ರಲ್ಲಿ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಆಗಿ ನೇಮಕಗೊಂಡರು. ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯು ಯುಜಿಸಿ ನೂತನ ನಿಯಮಾನುಸಾರ
ರಸಾಯನಶಾಸ್ತ್ರ ಪ್ರಾಧ್ಯಾಪಕರನ್ನಾಗಿಸಿ ಬಡ್ತಿ ನೀಡಿತು. ದಕ್ಷಿಣ ಕನ್ನಡದ ಖಾಸಗಿ ಕಾಲೇಜುಗಳ ಪೈಕಿ ಮೊದಲ ಬಾರಿಗೆ ಡಾ.ವಿಶ್ವನಾಥ ಪಿ ಅವರಿಗೆ ಪ್ರಾಧ್ಯಾಪಕ ಹುದ್ದೆ ಲಭಿಸಿರುವುದು ವಿಶೇಷ.

ಡಾ.ವಿಶ್ವನಾಥ ಪಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳು, ಕಾರ್ಯಾಗಾರಗಳು ಮತ್ತು ವಿಚಾರಗೋಷ್ಠಿಗಳು ಸೇರಿದಂತೆ ಅನೇಕ ಮಹತ್ವದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿದ್ದಾರೆ. ತಮ್ಮ ಸಂಶೋಧನಾ ಅಧ್ಯಯನದ ಆಧಾರದಲ್ಲಿ 38 ಸಂಶೋಧನಾ ಪ್ರಬಂಧಗಳನ್ನು ಪೀರ್ ರೀವ್ಯೂವ್ಡ್ ಮತ್ತು ಯುಜಿಸಿ ಕೇರ್ ಲಿಸ್ಟ್ ನಲ್ಲಿ ಆದ್ಯತೆ ಪಡೆದ ಸಂಶೋಧನಾ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ. ಅಲ್ಲದೇ 12 ಸಂಶೋಧನಾ ಪ್ರಬಂಧಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮಂಡಿಸಿದ್ದಾರೆ. ತುಮಕೂರು ವಿಶ್ವವಿದ್ಯಾಲಯದಿಂದ ಸಂಶೋಧನಾ ಮಾರ್ಗದರ್ಶಕರಾಗಿ ನಿಯೋಜಿತರಾಗಿರುವ ಇವರ ಮಾರ್ಗದರ್ಶನದಲ್ಲಿ ಒಬ್ಬರು ಪಿ.ಎಚ್.ಡಿ ಮತ್ತು ಒಬ್ಬರು ಎಂ.ಫಿಲ್ ಪದವಿ ಪಡೆದಿದ್ದಾರೆ. ಯುಜಿಸಿಯಿಂದ ಅನುಮೋದಿತ ಮೂರು ಕಿರಿಯ ಸಂಶೋಧನಾ ಯೋಜನೆಗಳನ್ನು ನಿರ್ವಹಿಸಿದ್ದಾರೆ. ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದು ರಸಾಯನಶಾಸ್ತ್ರ ವಿಭಾಗದಿಂದ ನಿರ್ವಹಿಸಲ್ಪಟ್ಟ ಸಂಶೋಧನಾ ಯೋಜನೆಗೆ ಕೋ ಇನ್ವೆಸ್ಟಿಗೇಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಿಂದ ಅನುಮೋದಿತಗೊಂಡ ಮಹತ್ವದ
ಸಂಶೋಧನಾ ಯೋಜನೆಯ ಸ್ನಾತಕೋತ್ತರ ಹಂತದಲ್ಲಿ ಯೋಜನಾನುಷ್ಠಾನ ಸಮೂಹದ ಅಧ್ಯಕ್ಷ ಹುದ್ದೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಬೋಧನೆ, ಸಂಶೋಧನಾ ಅಧ್ಯಯನ ಮತ್ತು ಸಾಂಸ್ಥಿಕ ಆಡಳಿತಾತ್ಮಕ ಹುದ್ದೆಗಳ ಸಮರ್ಥ ನಿರ್ವಹಣೆ – ಇವು ಡಾ.ವಿಶ್ವನಾಥ ಪಿ ಅವರ ಶೈಕ್ಷಣಿಕ ವೃತ್ತಿಪರತೆ ಮತ್ತು ನಾಯಕತ್ವದ ಗುಣಾತ್ಮಕ ಅಂಶಗಳು. ರಸಾಯನಶಾಸ್ತ್ರ ದ ಅಕ್ಯಾಡೆಮಿಕ್ ಹಿನ್ನೆಲೆಯೊಂದಿಗೆ ಎಸ್.ಡಿ.ಎಂ ಸಂಸ್ಥೆಯ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಆಡಳಿತಾತ್ಮಕ ಜವಾಬ್ದಾರಿಗಳನ್ನು ಶ್ರದ್ಧೆಯಿಂದ ನಿಭಾಯಿಸಿದವರು. ಬೋಧಕರು ಅಳವಡಿಸಿಕೊಳ್ಳಬೇಕಾದ ಶೈಕ್ಷಣಿಕ ಶಿಸ್ತನ್ನು ನೆಲೆಗೊಳಿಸಿದವರು. ವ್ಯವಸ್ಥಿತ ರೀತಿಯಲ್ಲಿ ಸಹೋದ್ಯೋಗಿಗಳ ತಂಡವನ್ನು ಕಟ್ಟುವ ಜಾಣ್ಮೆ ಇವರ ಶಕ್ತಿ. ವೃತ್ತಿಪರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಅಧ್ಯಾಪಕರು ಮತ್ತು ಅಧ್ಯಾಪಕೇತರ ಸಿಬ್ಬಂದಿಗೆ ಪ್ರೇರಣೆ ನೀಡುವ ಅನನ್ಯತೆ ಇವರದು.

ಡಾ.ವಿಶ್ವನಾಥ ಪಿ ನಿರ್ವಹಿಸಿದ ಹುದ್ದೆಗಳು ಮತ್ತು ಹೊಣೆಗಾರಿಕೆಗಳು:
- ರೋವರ್/ರೇಂಜರ್ ಕಾರ್ಯಕ್ರಮ ಅಧಿಕಾರಿ, 1994ರಿಂದ
2003
ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ, 2003-07
ಅಕ್ಯಾಡೆಮಿಕ್ ಕೌನ್ಸಿಲ್ ಸದಸ್ಯರು, ಎಸ್.ಡಿ.ಎಂ ಕಾಲೇಜು
(ಸ್ವಾಯತ್ತ), ಉಜಿರೆ, 2013ರವರೆಗೆ
ಕಾರ್ಯದರ್ಶಿಗಳು, ಎಸ್.ಡಿ.ಎಂ ಅಧ್ಯಾಪಕರ ಸಂಘ, 2015-
16
ಉಪಾಧ್ಯಕ್ಷರು, ಮಂಗಳೂರು ವಿಶ್ವವಿದ್ಯಾಲಯದ
ಅಧ್ಯಾಪಕರ ಸಂಘ (ಅಮುಕ್ತ್) 2015-2017
ಸಂಯೋಜಕರು, ಸಿ.ಪಿ.ಇ ಸ್ಕೀಮ್, ಯುಜಿಸಿ, ನವದೆಹಲಿ, ಎಸ್‌ಡಿಎಂ
ಕಾಲೇಜು, ಉಜಿರೆ. 2014-2019
ಸದಸ್ಯರು, ಐಕ್ಯೂಎಸಿ, ಅಕ್ಯಾಡೆಮಿಕ್ ಕೌನ್ಸಿಲ್, ಎಸ್.ಡಿ.ಎಂ
ಕಾಲೇಜು, ಉಜಿರೆ 2014ರವರೆಗೆ
ಅಧ್ಯಕ್ಷರು, ನ್ಯಾಕ್ ಕ್ರೇಟಿರಿಯನ್ 2, ಟೀಚಿಂಗ್, ಲರ್ನಿಂಗ್
ಮತ್ತು ಇವ್ಯಾಲ್ಯುವೇಷನ್, 2014 – 2020
ನಿರ್ದೇಶಕರು, ಎಸ್.ಡಿ.ಎಂ ಸಂಶೋಧನಾ ಕೇಂದ್ರ,
ತುಮಕೂರು ವಿಶ್ವವಿದ್ಯಾಲಯ, 2016ರಿಂದ 2021
ಉಪಾಧ್ಯಕ್ಷರು, ಎಸ್.ಡಿ.ಎಂ ಸಿಬ್ಬಂದಿ ಸೌಹಾರ್ದ ಸಹಕಾರಿ
ನಿಯಮಿತ(ರಿ), ಉಜಿರೆ. 2019ರಿಂದ
ಕನ್ಸಲ್ಟಂಟ್, ವಾಟರ್ ಕ್ವಾಲಿಟಿ ಮೇಂಟೇನೆನ್ಸ್, ಎಸ್.ಡಿ.ಎಂ
ಸ್ವಿಮ್ಮಿಂಗ್ ಪೂಲ್, 2020ರ ಜುಲೈ ತಿಂಗಳಿಂದ
ಸದಸ್ಯರು, ಐಕ್ಯೂಎಸಿ, ಎಸ್.ಡಿ.ಎಂ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ,
ಉಜಿರೆ, 2024ರಿಂದ
ಕಾರ್ಯಕಾರಿ ಮಂಡಳಿ ಸದಸ್ಯರು, ಎಸ್.ಡಿ.ಎಂ ಕಾಲೇಜು
(ಸ್ವಾಯತ್ತ), ಉಜಿರೆ, 2025ರಿಂದ
ಅಧ್ಯಕ್ಷರು, ಅಧ್ಯಯನ ಮಂಡಳಿ, ಎಂಎಸ್‌ಸಿ
ಕೆಮಿಸ್ಟ್ರಿ/ಆರ್ಗ್ಯಾನಿಕ್ ಕೆಮಿಸ್ಟ್ರಿ, ಎಸ್.ಡಿ.ಎಂ ಕಾಲೇಜು, ಉಜಿರೆ
ಸದಸ್ಯರು, ಅಧ್ಯಯನ ಮಂಡಳಿ, ಸೇಂಟ್
ಅಲೋಷಿಯಸ್ ಕಾಲೇಜು, ಮಂಗಳೂರು 2020ರಿಂದ
2022ರವರೆಗೆ - ಸರ್ಕಾರಿ ವಿಜ್ಞಾನ ಕಾಲೇಜು, ಹಾಸನ. 2022ರಿಂದ
2024ರವರೆಗೆ - ವಿವೇಕಾನಂದ ಕಾಲೇಜು, ಪುತ್ತೂರು 2022ರಿಂದ
2025ರವರೆಗೆ
ಆಂತರಿಕ ಪರೀಕ್ಷಾ ಮಂಡಳಿ ಸದಸ್ಯರು, ಸೇಂಟ್
ಅಲೋಷಿಯಸ್ ಕಾಲೇಜು, ಮಂಗಳೂರು - ಸರ್ಕಾರಿ ವಿಜ್ಞಾನ ಕಾಲೇಜು, ಹಾಸನ
- ಯೆನಪೊಯ ವಿಶ್ವವಿದ್ಯಾಲಯ
- ತುಮಕೂರು ವಿಶ್ವವಿದ್ಯಾಲಯ
