ಪುತ್ತೂರು:(ಮಾ.4) ಎಲೆಚುಕ್ಕಿ ರೋಗದಲ್ಲಿ ಸುಳ್ಯ-ಪುತ್ತೂರು ಭಾಗದ ರೈತರು ಬೆಲೆ ನಾಶದಿಂದ ಹೈರಾಣಗಿದ್ದಾರೆ. ರೋಗಕ್ಕೆ ಸಮರ್ಪಕವಾಗಿ ಮದ್ದುಗಳು ತೋಟಗಾರಿಕೆ ಇಲಾಖೆಯಲ್ಲಿ ಸಿಗುತ್ತಿಲ್ಲ. ಪೋಷಕಾಂಶಗಳನ್ನು ನೀಡುತ್ತಿಲ್ಲ. ಔಷಧಿಗಳ ಕೊರತೆಯಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿದರು.

ಇದನ್ನೂ ಓದಿ: ಪುತ್ತೂರು: ಮುಳಿಯ ಜ್ಯುವೆಲ್ಸ್ ನಲ್ಲಿ ಡೈಮಂಡ್ ಫೆಸ್ಟ್‌ಗೆ ಚಾಲನೆ
ರಾಜ್ಯದ ವಿಧಾನ ಮಂಡಲ ಅಧಿವೇಶನ ಆರಂಭಗೊಂಡಿದ್ದ ಮಂಗಳವಾರ ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಎಲೆ ಚುಕ್ಕಿ ರೋಗದ ಕುರಿತು ಧ್ವನಿ ಎತ್ತಿ, ಕೇಂದ್ರದಿಂದ ಅನುದಾನ ಬಂದರು ರೈತರ ಕೈಗೆ ಸೇರಿಲ್ಲ. ರಾಜ್ಯದಿಂದಲೂ ಅನುದಾನ ಶೀಘ್ರವಾಗಿ ಒದಗಿಸಬೇಕು ಈ ಸಮಸ್ಯೆಯನ್ನು ಬಗೆಹರಿಸಬೇಕು ಆಗ್ರಹಿಸಿದರು.


ಶೀಲಿಂದ್ರ ಸಮರ್ಪಕವಾಗಿ ದೊರಕುತ್ತಿಲ್ಲ. ಗುಣ ಮಟ್ಟದ ಸುಣ್ಣಸಿಗುತ್ತಿಲ್ಲ. ಸರಕಾರ ರೋಗಗಕ್ಕೆ ಔಷಧಿ ಕಂಡುಕೊಳ್ಳಲು ಸುಮಾರು 50 ಲಕ್ಷ ಖರ್ಚು ಮಾಡಲಾಗಿದೆ. ಆದರೆ ವರದಿ ಇನ್ನೂ ಬಂದಿಲ್ಲ. ಪರ್ಯಾಯ ಬೆಳೆಗೆ ಕಾಫಿ ಸೂಚಿಸಿದ್ದು ಇನ್ನೂ ಶಕ್ತಿ ತುಂಬು ಕಾರ್ಯವಾಗಿಲ್ಲ. ಕೇಂದ್ರದಿಂದ ಅನುದಾನ ಬಂದರು ರಾಜ್ಯ ಸರಕಾರ ಅನುದಾನ ಮಂಜೂರು ಮಾಡಲು ತಡವರಿಸುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಹೇಳಿದರು. ಅವರೊಂದಿಗೆ ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಧ್ವನಿಗೂಡಿಸಿದರು.


ಕೇಂದ್ರದಿಂದ ಅನುದಾನ ಬಂದಿದ್ದು ರಾಜ್ಯದ ಅನುದಾನ ಜೋಡಿಕರಣ ಪ್ರಕ್ರಿಯೆ ಮಾಡಲಾಗುತ್ತಿದ್ದು ಶೀಘ್ರವೇ ನೀಡಲು ತಯಾರಿ ಮಾಡುತ್ತಿದ್ದೇವೆ. ಒಂದು ಹೇಕ್ಟರ್‌ಗೆ 1,200 ರೂ. ನೀಡುತ್ತಿದ್ದು ಅದು ಕಡಿಮೆ ಆಗುತ್ತದೆ ಎಂದು ಕೇಂದ್ರಕ್ಕೆ ಹೆಚ್ಚುವರಿ ಮಾಡುವಂತೆ ಮನವಿ ಕಳುಹಿಸಲಾಗಿದೆ ಎಂದು ತೋಟಗಾರಿಕಾ ಇಲಾಖಾ ಸಚಿವರು ಉತ್ತರಿಸಿದರು.
