ಉಜಿರೆ: (ಮಾ.4)”ಬೆಂಕಿ ಅವಘಡಗಳು ಹಾಗೂ ಆರೋಗ್ಯದ ಕುರಿತ ಜಾಗೃತಿ, ಮುಂಜಾಗೃತಾ ಕ್ರಮಗಳನ್ನು ತಿಳಿದಿರುವುದು ಅತ್ಯವಶ್ಯಕ. ಪ್ರತಿಯೊಬ್ಬರೂ ಅವರವರ ಮನೆ, ಸುತ್ತಮುತ್ತಲಿನ ವಸ್ತು, ಜನ, ಪ್ರಾಣಿ-ಪಕ್ಷಿಗಳನ್ನು ಇಂತಹ ತುರ್ತು ಸಮಯದಲ್ಲಿ ಕಾಪಾಡಿಕೊಳ್ಳುವುದು ಕರ್ತವ್ಯವಾಗಿದೆ” ಎಂದು ಮಂಗಳೂರಿನ ಫೈರ್ ಸೇಫ್ಟಿ ಹಾಗೂ ಹೆಲ್ತ್ ಸೇಫ್ಟಿ ಯ ತರಬೇತುದಾರರಾದ ಶ್ರೀ ಸತ್ಯರಾಜ್, “ಫೈರ್ ಸೇಫ್ಟಿ ಅಭಿಯಾನ್” ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ಇವರು ಎಸ್.ಡಿ.ಎಂ ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಇ ಶಾಲೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾಹಿತಿ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಸಿ.ಬಿ.ಎಸ್.ಇ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.



ವೇದಿಕೆಯಲ್ಲಿ ಎಸ್.ಡಿ.ಎಂ ಸೆಕೆಂಡರಿ ಅನುದಾನಿತ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಸುರೇಶ್, ಶಿಕ್ಷಕ ಮೋನಪ್ಪ ಹಾಗೂ ಎಸ್.ಡಿ.ಎಮ್ ಸಿ.ಬಿ.ಎಸ್.ಇ ಶಾಲೆಯ ಶಿಕ್ಷಕಿ ಶಾಂಟಿ ಜಾರ್ಜ್ ಇವರು ಉಪಸ್ಥಿತರಿದ್ದರು.

ಶಿಕ್ಷಕ ಗಣೇಶ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕ ಕಿರಣ್‌ರಾಜ್ ನಿರೂಪಿಸಿದರು.
